ಹಾಯ್ ಬೆಂಗಳೂರ್

ಕೋವಿಡ್ ವ್ಯಾಕ್ಸಿನ್ ಬಗ್ಗೆ ಯಾವುದೇ ಭಯ ಬೇಡ: ಡಾ.ಮಂಜುನಾಥ್

 “ಕೋವಿಡ್ ವ್ಯಾಕ್ಸಿನ್ ನ ಯಾರೂ ನಿರ್ಲಕ್ಷ್ಯ ಮಾಡಬಾರದು. ಕೂಡಲೇ ಎಲ್ಲರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಯಾವುದೇ ಭಯ ಬೇಡ. ವ್ಯಾಕ್ಸಿನ್ ತೆಗೆದುಕೊಂಡ ಬಳಿಕ ಜ್ವರ ಬಂದರೆ ಅದು ಅಡ್ಡ ಪರಿಣಾಮ ಅಲ್ಲ, ಅದು ಕೇವಲ ಪರಿಣಾಮ ಅಷ್ಟೆ ಅಂತ ಖ್ಯಾತ ಹೃದ್ರೋಗ ತಜ್ಞ ಡಾ. ಮಂಜುನಾಥ್ ತಿಳಿಸಿದ್ದಾರೆ.

ಈ ಮಧ್ಯೆ ನಿನ್ನೆ ಬೆಂಗಳೂರು ನಗರದಲ್ಲಿ 4,422 ಇದ್ದ ಪ್ರಕರಣಗಳು ಇವತ್ತು 6,034ಕ್ಕೆ ಏರಿಕೆಯಾಗುತ್ತಾ ಎಂಬ ಅನುಮಾನ ಕಾಡುತ್ತಿದೆ. ಈಗಾಗಲೇ ಸರ್ಕಾರಿ ಆಸ್ಪತ್ರೆಗಳೆಲ್ಲವೂ ಫುಲ್ ಆಗಿದ್ದು ಖಾಸಗಿ ಆಸ್ಪತ್ರೆಗಳು ಕೂಡ ಭರ್ತಿಯಾಗುವ ಹಂತದಲ್ಲಿದೆ.

ಕಳೆದ ಬಾರಿ ಪ್ರತಿನಿತ್ಯ ಸಾವಿರದ ಇನ್ನೂರಕ್ಕೂ ಹೆಚ್ಚು ಮಂದಿ ಸತ್ತಿದ್ದರು. ಈ ಬಾರಿ ಪ್ರತಿನಿತ್ಯ 750 ಮಂದಿ ಸಾಯುತ್ತಿದ್ದಾರೆ. ಎರಡನೇ ಅಲೆಯು ಆರಂಭಿಕ ಹಂತದಲ್ಲಿದ್ದು ಇದೇನಾದರೂ ಪೀಕ್ ಗೆ ಹೋದರೆ ದಿನನಿತ್ಯ ಸಾಯುವರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಅಂತ ವೈದ್ಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

Leave a Reply

Your email address will not be published. Required fields are marked *