ಹಾಯ್ ಬೆಂಗಳೂರ್

ಈ ಮುಸ್ಲಿಂ ಹುಡುಗ ಮೋದಿಯ ಕಿವಿಯಲ್ಲಿ ಹೇಳಿದ್ದೇನು ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರಕ್ಕೆಂದು ಹೋದಾಗ ಅಲ್ಲಿ ಜುಲ್ಫೀಕರ್ ಅಲಿ ಎಂಬ ಮುಸ್ಲಿಂ ಹುಡುಗ ಅವರ ಹತ್ತಿರ ಬಂದು ಕಿವಿಯಲ್ಲಿ ಏನೋ ಹೇಳಿದ. ಆ ಫೊಟೋ ಈಗ ಎಲ್ಲೆಡೆ ವೈರಲ್ ಆಗಿದೆ.

ತಲೆಯಲ್ಲಿ ಲದ್ದಿ ತುಂಬಿಕೊಂಡಿರೋ ಕೆಲವರು ಈ ಚಿತ್ರವನ್ನು ಫೊಟೋಶಾಪ್ ಮಾಡಲಾಗಿದೆ ಅಂತ ರಾಗ ಹಾಡಲು ಶುರು ಮಾಡಿದರು. ಅಷ್ಟರಲ್ಲಿ ಆ ಹುಡುಗನೇ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿಬಿಟ್ಟ. ಅದು ನಾನೇ, ನನಗೆ ಮೋದಿಯವರ ಜೊತೆಗೆ ಮಾತನಾಡಬೇಕು ಮತ್ತು ಫೊಟೋ ತೆಗೆಸಿಕೊಳ್ಳಬೇಕು ಅಂತ ತುಂಬಾನೇ ಆಸೆ ಇತ್ತು. ಅದನ್ನು ಹೋಗಿ ಅವರ ಕಿವಿಯಲ್ಲಿ ಹೇಳಿದೆ. ಅದಕ್ಕವರು ಸಂತೋಷದಿಂದ ಆಯಿತು ಅಂತ ಒಪ್ಪಿಗೆ ನೀಡಿದರು ಅಂತ ಹೇಳುವ ಮೂಲಕ ಕೊಂಕು ನುಡಿಯುವವರ ಬಾಯಿಗೆ ಬೀಗ ಹಾಕಿದ್ದಾನೆ.

ಮೋದಿಯವರು ನನಗೆ ಏನು ಬೇಕು ಕೇಳು ಅಂತ ಹೇಳಿದರು. ನನಗೆ ಯಾವುದೇ ಪದವಿ ಪುರಸ್ಕಾರ ಬೇಡ. ನಿಮ್ಮ ಜೊತೆಗೆ ಒಂದೇ ಒಂದು ಫೊಟೋ ತೆಗೆಸಿಕೊಳ್ಳಬೇಕು ಎಂಬ ಆಸೆ ಇದೆ ಅಂತ ಹೇಳಿದೆ. ಅದಕ್ಕವರು ಸಂತೋಷವಾಗಿ ಒಪ್ಪಿಕೊಂಡರು. ಇದರಿಂದ ನನಗೆ ಬಹಳ ಸಂತೋಷವಾಯಿತು ಅಂತ ಹೇಳಿದ್ದಾನೆ.

Leave a Reply

Your email address will not be published. Required fields are marked *