ಹಾಯ್ ಬೆಂಗಳೂರ್

ವಿಕ್ರಾಂತ್ ರೋಣ ರಿಲೀಸ್ ಗೆ ಡೇಟ್ ಫಿಕ್ಸ್: ಕಿಚ್ಚ ಅಭಿಮಾನಿಗಳಲ್ಲಿ ಗರಿಗೆದರಿತು ಕುತೂಹಲ

ಕನ್ನಡದಲ್ಲಿ ರಿಲೀಸ್ ಆಗಬೇಕಿದ್ದ ದೊಡ್ಡ ದೊಡ್ಡ ಚಿತ್ರಗಳೆಲ್ಲಾ ರಿಲೀಸ್ ಆಗಿ ಹೋದವು. ದರ್ಶನ್ ನಟನೆಯ ರಾಬರ್ಟ್, ಪುನೀತ್ ನಟನೆಯ ಯುವರತ್ನ, ಧ್ರುವ ಸರ್ಜಾ ನಟಿಸಿರುವ ಪೊಗರು ತೆರೆಕಂಡು ಅಭಿಮಾನಿಗಳನ್ನು ರಂಜಿಸಿದ್ದೂ ಆಯಿತು. ಯುವರತ್ನ ಓಟಿಟಿ ವೇದಿಕೆಯಲ್ಲಿ ರಿಲೀಸ್ ಆಗಲು ಬೇರೆಯದೇ ಕಾರಣಗಳಿವೆ. ಅದಿರಲಿ ಬಿಡಿ.

ಈಗ ವಿಷಯ ಏನಪ್ಪಾ ಅಂದ್ರೆ, ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಎಂಬ ಮತ್ತೊಂದು ಹೈಬಜೆಟ್ ಚಿತ್ರ ರೆಡಿಯಾಗುತ್ತಿದೆ. ಈಗಾಗಲೇ ಈ ಚಿತ್ರದ ಫಸ್ಟ್ ಲುಕ್ ದುಬೈನ ಬುರ್ಜ್ ಖಲೀಫಾದ ಮೇಲೆ ಬಿಡುಗಡೆಯಾಗಿದ್ದು ಸುದೀಪ್ ಫ್ಯಾನ್ಸ್ ಕೋಟ್ಯಂತರ ಸಂಖ್ಯೆಯಲ್ಲಿ ಕಣ್ತುಂಬಿಕೊಂಡಿದ್ದಾರೆ.
ಅಂದಹಾಗೆ ಈ ಚಿತ್ರವನ್ನು ಬಿಗ್ ಸ್ಕ್ರೀನ್ ನಲ್ಲಿ ಅಂದರೆ ಬೆಳ್ಳಿ ತೆರೆಯ ಮೇಲೆ ನೋಡಬೇಕು ಅಂದರೆ ಅಭಿಮಾನಿಗಳು ಇನ್ನೂ ಮೂರು ತಿಂಗಳುಗಳ ಕಾಲ ಕಾಯಲೇಬೇಕು. ಆಗಸ್ಟ್ 19ರಂದು ಚಿತ್ರ ರಿಲೀಸ್ ಅಂತ ಈಗಾಗಲೇ ನಿರ್ದೇಶಕ ಅನುಪ್ ಭಂಡಾರಿ ಹೇಳಿದ್ದಾರೆ.

Leave a Reply

Your email address will not be published. Required fields are marked *