ಹಾಯ್ ಬೆಂಗಳೂರ್

ಬೆಂಗಳೂರಿನಲ್ಲಿ ಇಂದು ಒಂದೇ ದಿನ ಒಂದು ಸಾವಿರ ಜನರಲ್ಲಿ ಕೊರೋನಾ ಪತ್ತೆ

ಬೆಂಗಳೂರು ನಗರದಲ್ಲಿ ಕೊರೋನಾ ದಿನದಿಂದ ದಿನಕ್ಕೆ ತೀವ್ರವಾಗತೊಡಗಿದೆ. ಇಂದು ಒಂದೇ ದಿನ ಬೆಂಗಳೂರು ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೋನಾ ಸೋಂಕು ತಗುಲಿಕೊಂಡಿದೆ. ನಿನ್ನೆ ನಾಲ್ಕು ಸಾವಿರದ ಅರವತ್ತಾರು ಪ್ರಕರಣಗಳು ಇತ್ತು. ಇಂದು ಒಂದೇ ದಿನಕ್ಕೆ ಒಂದು ಸಾವಿರ ಕೇಸ್ ದಾಖಲಾಗಿದ್ದು ಒಟ್ಟು ಐದು ಸಾವಿರದ ಅರವತ್ತಾರು ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ.

ನಾಳೆಯಿಂದ ಬೆಂಗಳೂರಿನಲ್ಲಂತೂ ಕಟ್ಟುನಿಟ್ಟಾಗಿ ಕೊರೋನಾ ಗೈಡ್ ಲೈನ್ಸ್ ಜಾರಿಯಾಗಲಿದೆ. ಮೊದಲು ಥಿಯೇಟರ್ ಗಳಲ್ಲಿ ಹೌಸ್ ಫುಲ್ ಗೆ ಬ್ರೇಕ್ ಹಾಕಲಾಗುತ್ತದೆ. ಕೇವಲ ಐವತ್ತು ಪರ್ಸೆಂಟ್ ನಷ್ಟು ಸೀಟುಗಳ ಭರ್ತಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಚುನಾವಣೆ ವೇಳೆ ಜನಸಂದಣಿಗೆ ಬ್ರೇಕ್ ಹಾಕುವ ಬಗ್ಗೆ ಕೂಡ ಈಗಾಗಲೇ  ಚರ್ಚಿಸಲಾಗಿದೆ. ಈ ಕುರಿತು ನಾಳೆ ಸರ್ವಪಕ್ಷ ಸಭೆ ಕರೆಯಲು ಸರ್ಕಾರ ನಿರ್ಧರಿಸಿದೆ.

ಅದ್ಯಾಕೆ ಸರ್ಕಾರ ಹೋಗಿ ಹೋಗಿ ಥಿಯೇಟರ್ ಗಳನ್ನೇ ಟಾರ್ಗೆಟ್ ಮಾಡುತ್ತಿದೆಯೋ ಗೊತ್ತಿಲ್ಲ. ಸೀಟುಗಳ ಮಧ್ಯೆ ಗ್ಲಾಸ್ ಹಾಕಿಸಿದರೆ ಸಾಕು ಆರಾಮಾಗಿ ಹೋಗಿ ಎಲ್ಲರೂ ಕುಳಿತು ನೋಡಬಹುದಲ್ವಾ. ಇದನ್ನು ಯಾಕೆ ಸರ್ಕಾರ ಅರ್ಥ ಮಾಡಿಕೊಳ್ಳುತ್ತಿಲ್ಲವೋ ಆ ದೇವರೇ ಬಲ್ಲ.

ಇನ್ನು ಸ್ವಿಮ್ಮಿಂಗ್ ಪೂಲ್, ಜಿಮ್, ಪಾರ್ಟಿ ಹಾಲ್ ಮತ್ತು ಕಾಂಪ್ಲೆಕ್ಸ್ ಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಕಾಂಪ್ಲೆಕ್ಸ್ ಗಳಲ್ಲಿ ಸೆಕ್ಷನ್ 144 ಹಾಕಲಾಗುತ್ತಿದೆ. ಒಟ್ಟಿನಲ್ಲಿ ಮತ್ತೊಂದು ಸುತ್ತಿನ ಲಾಕ್ ಡೌನ್ ಜಾರಿಯಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿದೆ.

Leave a Reply

Your email address will not be published. Required fields are marked *