ಹಾಯ್ ಬೆಂಗಳೂರ್

ಕಳೆದ ಇಪ್ಪತ್ತನಾಲ್ಕು ಗಂಟೆಯಲ್ಲಿ ದಾಖಲಾಗಿರುವ ಹೊಸ ಪ್ರಕರಣಗಳು ಬೆಚ್ಚಿ ಬೀಳಿಸುವಂತಿವೆ

ಕಳೆದ ಇಪ್ಪತ್ತನಾಲ್ಕು ಗಂಟೆಯ ಅವಧಿಯು ಅತ್ಯಂತ ಕ್ರೂರವಾಗಿದೆ. ಒಂದೇ ಒಂದು ದಿನದಲ್ಲಿ ಮೂರು ಲಕ್ಷದ ಹದಿನಾಲ್ಕು ಸಾವಿರ ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ ಮತ್ತು ಎರಡು ಸಾವಿರದ ಒಂದು ನೂರಾ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಇದು ಕೇಂದ್ರ ಆರೋಗ್ಯ ಸಚಿವಾಲಯವೇ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿ.

ಇನ್ನು ಬೆಂಗಳೂರಿನಲ್ಲಿ ಕೊರೋನಾ ಕರ್ಮಕಾಂಡ ಜೋರಾಗೇ ನಡೀತಿದೆ. ಒಂದು ಸಾವಿರ ರುಪಾಯಿ ಕೊಟ್ರೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕೊಡುತ್ತಿದ್ದಾರೆ. ಟೆಸ್ಟ್ ಮಾಡದೆಯೇ ಈ ರೀತಿ ಮಾಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಬಗ್ಗೆ ಯಾವ ವೈದ್ಯಾಧಿಕಾರಿಯೂ ತಲೆ ಕೆಡಿಸಿಕೊಂಡಿಲ್ಲ. ಅಕಸ್ಮಾತ್ ದುಡ್ಡು ಬಿಚ್ಚಲಿಲ್ಲ ಅಂದರೆ ಪಾಸಿಟಿವ್ ರಿಪೋರ್ಟ್ ಕೊಡುತ್ತಾರೆ.

ಪಾಸಿಟಿವ್ ಇಲ್ಲದೆಯೇ ಅದ್ಹೇಗೆ ಪಾಸಿಟಿವ್ ರಿಪೋರ್ಟ್ ಕೊಡುತ್ತಾರೆ ಅಂತ ನೀವು ಕೇಳಬಹುದು. ಜ್ವರ, ಉಸಿರಾಟದ ತೊಂದರೆ ಇದ್ದರೆ ಮಾತ್ರ ಪಾಸಿಟಿವ್ ರಿಪೋರ್ಟ್ ಬರಬೇಕು. ಇಲ್ಲ ಅಂದರೆ ಇಲ್ಲ. ಇದನ್ನು ಕೇಳಿದರೆ ಅವರು ಬೇರೆಯದೇ ವಾದ ಮಂಡಿಸುತ್ತಾರೆ. ನಮಗೇನು ಗೊತ್ತು ಸಾರ್. ಇಲ್ಲಿ ತೋರಿಸ್ತಿದೆ, ಅದಕ್ಕೆ ಹೇಳ್ತೀವಿ ಅಂತ ನುಣುಚಿಕೊಳ್ಳುತ್ತಾರೆ.

ಅದಕ್ಕೆ ನೀವೇ ಒಂದು ಆಕ್ಸಿಮೀಟರ್ ಇಟ್ಟುಕೊಂಡು ಬಿಡಿ. ಆಗಾಗ್ಗೆ ಆಕ್ಸಿಜನ್ ಲೆವೆಲ್ ಚೆಕ್ ಮಾಡಿಸಿಕೊಳ್ಳುತ್ತಿರಿ. ಬಿಸಿ ನೀರು, ಕಷಾಯ, ಬಿಸಿ ಬಿಸಿಯಾದ ಆಹಾರ ಸೇವಿಸಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡರೆ ಕೋವಿಡ್ ನಿಂದ ಪಾರಾಗಬಹುದು.

Leave a Reply

Your email address will not be published. Required fields are marked *