ಹಾಯ್ ಬೆಂಗಳೂರ್

ದಿನೇ ದಿನೇ ಹೆಚ್ಚುತ್ತಿದೆ ಕೋವಿಡ್ ಸೋಂಕು: ಎಲ್ಲೆಡೆ ಜನರಲ್ಲಿ ಲಾಕ್ ಡೌನ್ ನದ್ದೇ ಆತಂಕ

ಭಾರತದಲ್ಲಿ ಕೋವಿಡ್ ಅಲೆ ನಿಯಂತ್ರಣ ತಪ್ಪಿ ಹೋಗಿದೆ.  ನಿನ್ನೆ ಒಂದೇ ಒಂದು ದಿನಕ್ಕೆ 1,84,372 ಹೊಸ ಪ್ರಕರಣಗಳು ದಾಖಲಾಗುವ ಮೂಲಕ ಇಡೀ ದೇಶದಲ್ಲೇ ಕೊರೋನಾ ಸೋಂಕಿತರ ಸಂಖ್ಯೆಯು 1,38,73,825ಕ್ಕೆ ಬಂದು ನಿಂತಿದೆ. ಅಮೆರಿಕಾ ಬಿಟ್ಟರೆ ವಿಶ್ವದಲ್ಲಿ ಭಾರತವೇ ಅತೀ ಹೆಚ್ಚು ಸೋಂಕಿತರು ಇರುವ ದೇಶವಾಗಿದೆ.

ಇನ್ನೂ ಆತಂಕಕಾರಿ ಸಂಗತಿ ಅಂದರೆ ದೇಶಾದ್ಯಂತ ಕಳೆದ 24 ಗಂಟೆಗಳಲ್ಲಿ 1,027 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಸೇರಿ ಇಲ್ಲಿ ತನಕ ಸಾವನ್ನಪ್ಪಿರುವವರ ಸಂಖ್ಯೆ 1,72,085ಕ್ಕೆ ಬಂದು ನಿಂತಿದೆ. 1,23,36,036 ಮಂದಿಗೆ ವಾಸಿಯಾಗಿದೆ.

ಸಂಪೂರ್ಣವಾಗಿ ಲಾಕ್ ಡೌನ್ ಮಾಡಬೇಕಾ ಅಥವ ಬೇಡವಾ ಎನ್ನುವ ವಿಚಾರದಲ್ಲಿ ಸರ್ಕಾರಕ್ಕೆ ಸಾಕಷ್ಟು ಗೊಂದಲ ಇದೆ. ಎಲ್ಲ ರಾಜ್ಯಗಳು ಏನು ಮಾಹಿತಿ ನೀಡುತ್ತದೋ ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ನಿರ್ಧಾರ ತೆಗೆದುಕೊಳ್ಳಲಿದೆ.

ಈ ಪರಿ ವೇಗದಲ್ಲಿ ಕೋವಿಡ್ ಅಲೆ ಹಬ್ಬುತ್ತಿರುವುದನ್ನು ನೋಡಿದರೆ ಲಾಕ್ ಡೌನ್ ಮಾಡಿದರೂ ಮಾಡಬಹುದು ಅಂತ ಹೇಳಲಾಗ್ತಿದೆ. ಹಾಗಾಗದಿದ್ದರೆ ಸಾಕು ಅಂತ ಜನ ಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *