ಹಾಯ್ ಬೆಂಗಳೂರ್

ಕೋವಿಡ್ ನಿಂದ ಚೇತರಿಸಿಕೊಂಡ ನಂತರ ಕೆಲವರಲ್ಲಿ ಈ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ

ಇದು ಅತ್ಯಂತ ಗಂಭೀರವಾದ ವಿಷಯ. ಸುಮ್ಮನೆ ಓದಿ ಮರೆತುಬಿಡುವಂಥದ್ದಲ್ಲ. ಏನಾಗಿದೆ ಅಂತಂದ್ರೆ ಅಮೆರಿಕಾದಲ್ಲಿ ಕೋವಿಡ್ ನಿಂದ ಚೇತರಿಸಿಕೊಂಡು ಆರು ತಿಂಗಳಾಗಿರುವವರು ವಿಚಿತ್ರವಾದ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಎಲ್ಲರೂ ಅಲ್ಲ, ಕೆಲವರು ಮಾತ್ರ. ಆ ವಿಚಿತ್ರ ಖಾಯಿಲೆ ಯಾವುದೆಂದರೆ ಮಾನಸಿಕ ಅಸ್ವಸ್ಥತೆ ಮತ್ತು ನರ ದೌರ್ಬಲ್ಯತೆ.

ಈ ವೈರಾಣುವು ಮಾನಸಿಕ ಅಸ್ವಸ್ಥತೆಯೊಂದಿಗೆ ಹೇಗೆ ಸಂಬಂಧ ಕಲ್ಪಿಸಿಕೊಂಡಿತು ಅಂತ ವಿಜ್ಞಾನಿಗಳು ತಲೆ ಕೆಡಿಸಿಕೊಂಡು ಸಂಶೋಧನೆ ಮಾಡುತ್ತಿದ್ದಾರೆ. ಉದ್ವೇಗ ಮತ್ತು ಖಿನ್ನತೆ ಕೂಡ ಇದರಿಂದಲೇ ಉಂಟಾಗುತ್ತದಂತೆ. ಅದು ಹೇಗೆ ಅಂತ ತಡಕಾಡುತ್ತಿದ್ದಾರೆ ಸಂಶೋಧಕರು.

ಕೋವಿಡ್ ನಿಂದ ಚೇತರಿಸಿಕೊಂಡವರ ಪೈಕಿ ಕೆಲವರಿಗೆ ಮಿದುಳಿಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಮಾನಸಿಕ ಅಸ್ವಸ್ಥತೆ, ನರ ದೌರ್ಬಲ್ಯತೆಯು ಸಾಮಾನ್ಯ ಅಂತ ಬ್ರಿಟನ್ನಿನ ಆಕ್ಸ್ ಫರ್ಡ್ ಯೂನಿವರ್ಸಿಟಿಯ ಸೈಕಿಯಾಟ್ರಿಸ್ಟ್ ಮ್ಯಾಕ್ಸ್ ಟ್ಯಾಕ್ವೆಟ್ ಅವರು ಹೇಳಿದ್ದಾರೆ.

ಇದನ್ನು ಸುಮ್ಮನೆ ಬಿಡುವ ಹಾಗಿಲ್ಲ. ಅರ್ಜೆಂಟಾಗಿ ಸಂಶೋಧನೆ ನಡೆಸಿ ಪರಿಹಾರವನ್ನು ಕಂಡುಕೊಳ್ಳಲೇಬೇಕಾಗಿದೆ ಅಂತ ಟ್ಯಾಕ್ವೆಟ್ ಇದರ ಗಂಭೀರತೆಯನ್ನು ತಿಳಿಸುವ ಪ್ರಯತ್ನವನ್ನು ಮಾಡಿದ್ದಾರೆ.

Leave a Reply

Your email address will not be published. Required fields are marked *