ಹಾಯ್ ಬೆಂಗಳೂರ್

ಸಚಿನ್ ತೆಂಡೂಲ್ಕರ್ ಗೆ ಕೊರೋನಾ

ನಿವೃತ್ತ ಇಂಡಿಯನ್ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಗೆ ಕೊರೋನಾ ತಗುಲಿಕೊಂಡಿದೆ. ಅದಾಗಲೇ ಆರು ದಿನಗಳ ಹಿಂದೆಯೇ ಅವರು ಸೋಂಕಿತರಾಗಿದ್ದು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು ಅಭಿಮಾನಿಗಳಿಗೆ ಬಹಳ ಎಚ್ಚರಿಕೆ ಇಂದ ಇರುವಂತೆ ಹೇಳಿದ್ದಾರೆ.

ಅವರು ಶೀಘ್ರ ಗುಣಮುಖರಾಗಿ ಬರಲೆಂದು ಲಕ್ಷಾಂತರ ಅಭಿಮಾನಿಗಳು ದೇಶದಾದ್ಯಂತ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅವರಿಗೆಲ್ಲರಿಗೂ ಸಚಿನ್ ಧನ್ಯವಾದಗಳನ್ನು ತಿಳಿಸಿದ್ದು ಚಿಂತೆ ಮಾಡಬಾರದಾಗಿ ಮನವಿ ಮಾಡಿಕೊಂಡಿದ್ದಾರೆ. 

ಅಂತೆಯೇ ಇಂದಿಗೆ ಭಾರತ ತಂಡವು ಎರಡನೇ ಕ್ರಿಕೆಟ್ ವಿಶ್ವಕಪ್ ಗೆದ್ದು ಹತ್ತು ವರ್ಷವಾದ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ಅವರು ಶುಭಾಶಯ ಕೋರಿದ್ದಾರೆ.

Leave a Reply

Your email address will not be published. Required fields are marked *