ಹಾಯ್ ಬೆಂಗಳೂರ್

ಕೊರೋನಾ ಅಟ್ಟಹಾಸ: ಇಡೀ ಪ್ರಪಂಚದಲ್ಲೇ ಭಾರತ ಎರಡನೇ ಸ್ಥಾನಕ್ಕೆ ಬಂದು ನಿಂತಾಯ್ತು.

ದೇಶ ಮತ್ತೊಂದು ಸುತ್ತಿನ ಲಾಕ್ ಡೌನ್ ಆಗೋದು ಫಿಕ್ಸ್ ಅಂತ ಅನಿಸುತ್ತಿದೆ. ಅದಕ್ಕೆ ಬಲವಾದ ಕಾರಣವೂ ಸಿಕ್ಕಿದೆ. ಸದ್ಯ ಇಡೀ ಪ್ರಪಂಚದಲ್ಲೇ ಕೋವಿಡ್ ಸೋಂಕಿತರಲ್ಲಿ ನಮ್ಮ ದೇಶ ಸದ್ಯಕ್ಕೆ ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಅಮೆರಿಕಾ ಇದೆ. ಮೂರನೇ ಸ್ಥಾನದಲ್ಲಿ ಬ್ರೆಜಿಲ್ ಇದೆ.

ಅಸಲಿಗೆ ಇಷ್ಟು ದಿನ ಭಾರತವು ಬ್ರೆಜಿಲ್ ಗಿಂತ ಕೆಳಗಿತ್ತು. ಆದರೆ ಈಗ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ. ಬ್ರೆಜಿಲ್ಲನ್ನು ಹಿಂದಿಕ್ಕಿ ಹೋಗುವಷ್ಟು ಕೇಸ್ ಗಳು ಪ್ರತಿನಿತ್ಯ ದಾಖಲಾಗುತ್ತಿವೆ. ಅದ್ಯಾಕೆ ಹೀಗಾಗುತ್ತಿದೆಯೋ, ಅದೇನು ಮಾಡುವುದೋ, ವ್ಯಾಕ್ಸಿನ್ ಕಂಡು ಹಿಡಿದರೂ ಉಪಯೋಗವಾಗುತ್ತಿಲ್ಲವಾ? ಇದೆಲ್ಲಾ ಆಲೋಚನೆಗಳು ಮಂಕು ದಿಣ್ಣೆ ಮೋದಿ ತಲೇಲಿ ಸದ್ಯಕ್ಕೆ ಹೊರಳಾಡುತ್ತಿದೆ. ಅವರ ಅಕ್ಕ ಪಕ್ಕ ಸುತ್ತ ಮುತ್ತ ಪೀಡೆ ಪಿಶಾಚಿಗಳು ನರ್ತನ ಮಾಡುತ್ತಿವೆ. ಒಂದೊಂದು ಕಡೆಯಿಂದ ಒಂದೊಂದು ತೆರನಾದ ಸಲಹೆಗಳು ಬರತೊಡಗಿವೆ. ಅವೆಲ್ಲಾ ಸೇರಿ ಕಲಸುಮೇಲೋಗರ ಆಗಿ ರಾತ್ರಿ ಎಂಟು ಗಂಟೆಗೆ ವೇಳೆಗೆ ಭಾಯಿಯೋ ಔರ್ ಬೆಹನೋ ಅಂತ ಬರ್ತಾರೆ ನೋಡಿ ಮೋದಿ ಬಾಬಾ ಗಡ್ಡ ನೀವಿಕೊಂಡು.

ಎಲ್ಲಿದ್ದೀರೋ ಅಲ್ಲೇ ಇದ್ದುಕೊಂಡು ಗಂಟೆ ಬಾರಿಸಿ, ದೀಪ ಹಚ್ಚಿ ಅಂತ ಹೇಳುತ್ತಾರೆ. ರಿಚ್ ಪೀಪಲ್ ಅನಿಸಿಕೊಂಡೋರು ಮೋದಿಗೆ ಜೈ ಮೋದಿಗೆ ಜೈ ಅಂತ ಮನೇಲಿ ಕೂತುಕೊಂಡು ಮೈಸೂರ್ ಪಾಕ್ ಮೆಲ್ಲುತ್ತಾರೆ. ಪಾಪ ಬಡ ಆಟೋ ಡ್ರೈವರ್ ಇವತ್ತು ಗಿರಾಕಿ ಸಿಗಲಿಲ್ವಲ್ಲ ಅಂತ ಖಾಲಿ ಕೈಲಿ ಮನೇಗೆ ಹೋಗಿ ಹೊಟ್ಟೆ ತುಂಬ ತಣ್ಣೀರು ಕುಡಿದು ಮಕ್ಕಳ ಕೈಗೆ ಬನ್ನು ಕೊಟ್ಟು ಮಲಗಿಕೊಳ್ಳುತ್ತಾನೆ.

ಸಿದ್ದರಾಮಯ್ಯ ಹೇಳಿದ್ದು ನಿಜ. ಲಾಕ್ ಡೌನ್ ಮಾಡೋದಾದ್ರೆ ಒಬ್ಬಬ್ಬರ ಖಾತೆಗೂ ಹತ್ತತ್ತು ಸಾವಿರ ಹಾಕಿ ಆಮೇಲೆ ಏನಾದರೂ ಮಾಡಿಕೊಂಡು ಹಾಳಾಗಿ ಹೋಗಲಿ. ಅಲ್ವಾ ಮತ್ತೆ. ಒಮ್ಮೊಮ್ಮೆ ಸಿದ್ದು ಸರಿಯಾಗಿ ಮಾತಾಡ್ತಾರೆ. ಈ ಯಡಿಯೂರಪ್ಪ ಸರ್ಕಾರ ಅಂಥ ಪ್ರತಿಪಕ್ಷ ನಾಯಕ ಇಲ್ಲದಿದ್ರೆ ಇನ್ನೂ ಏನೇನು ಆಟ ಆಡ್ತಿತ್ತೋ. ಅವರನ್ನು ಅಂದು ಏನು ಪ್ರಯೋಜನ. ಆಪರೇಷನ್ ಕಮಲ ಮಾಡಿದಾಗಲೇ ಜನರು ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಬೇಕಿತ್ತು.

ಅದೇನೇ ಇರಲಿ. ಮತ್ತೊಂದು ಸುತ್ತಿನ ಲಾಕ್ ಡೌನ್ ಆಗದಿದ್ದರೆ ಸಾಕು. ಜನರು ದಯವಿಟ್ಟು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಸೇಫ್ ಆಗಿರಲಿ.

Leave a Reply

Your email address will not be published. Required fields are marked *