ಹಾಯ್ ಬೆಂಗಳೂರ್

ಕೊರೋನಾ ಪಾಸಿಟಿವ್ : ಕಾಂಗ್ರೆಸ್ ನಾಯಕ ರಾ ಗಾ ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಕೊರೋನಾ ಪಾಸಿಟಿವ್ ಸೋಂಕಿತರಾಗಿದ್ದಾರೆ. ಯಾಕೋ ಸ್ವಲ್ಪ ಹುಷಾರಿಲ್ಲ ಅನ್ನೋ ಥರ ಫೀಲ್ ಆಯ್ತು. ಪರೀಕ್ಷೆ ಮಾಡಿಸಿದಾಗ ಕೋವಿಡ್ ಪಾಸಿಟಿವ್ ಇರೋದು ಧೃಡವಾಗಿದೆ. ಹೆದರಿಕೊಳ್ಳುವಂಥದ್ದೇನೂ ಇಲ್ಲ. ಎಲ್ಲರೂ ಎಚ್ಚರಿಕೆ ಇಂದ ಇರಿ. ನನ್ನ ಜೊತೆ ಸಂಪರ್ಕದಲ್ಲಿದ್ದವರು ಮೊದಲು ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ. ಒಂದು ತಿಂಗಳಿನಲ್ಲಿ ನನ್ನ ಆರೋಗ್ಯ ಸರಿ ಹೋಗುತ್ತದೆ ಅಂತ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಅವರ ಆರೋಗ್ಯ ಬೇಗನೆ ಸುಧಾರಿಸಲಿ ಅಂತ ಕಾಂಗ್ರೆಸ್ ಕಾರ್ಯಕರ್ತರೆಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಕೇರಳ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಚುನಾವಣೆ ಸಮಯವಾಗಿರೋದ್ರಿಂದ ರಾಹುಲ್ ಗಾಂಧಿ ಅಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಇನ್ನೂ ಮೂರು ಹಂತದ ಚುನಾವಣೆ ಬಾಕಿ ಇದೆ. ಆದರೆ ಈ ಪರಿಸ್ಥಿತಿಯಲ್ಲಿ ಅವರಿಗೆ ಪ್ರಚಾರ ಮಾಡಲು ಆಗೋದಿಲ್ಲ. ಹಾಗಾಗಿ ಕಾರ್ಯಕರ್ತರು, ಜಿಲ್ಲಾ ಮುಖಂಡರು ಕ್ಯಾಂಪೇನ್ ಮಾಡಿಕೊಳ್ಳುತ್ತಾರೆ.

Leave a Reply

Your email address will not be published. Required fields are marked *