ಹಾಯ್ ಬೆಂಗಳೂರ್

ಕೊರೋನಾಗೆ ಕೊಡಲಾಗುವ ಔಷಧಿಯನ್ನು ನಕಲಿ ಮಾಡುವವರು ಹುಟ್ಟಿಕೊಂಡಿದ್ದಾರೆ ಎಚ್ಚರ!

ಈ ಕಾಲದಲ್ಲಿ ಯಾರನ್ನು ನಂಬಲು ಸಾಧ್ಯವಿಲ್ಲ. ಯಾಕೆಂದರೆ ಕೊರೋನಾ ತಡೆಗಟ್ಟಲು ಹಾಕಲಾಗುವ ಲಸಿಕೆಯನ್ನೂ ಬಿಡದೆ ನಕಲಿ ಮಾಡಿದ್ದಾರೆ ಪಾಪಿಗಳು. ಹೌದು, ಕೊರೋನಾವನ್ನು ತಡೆಗಟ್ಟಲು ಹಾಕಲಾಗುವ ರೆಮ್ ಡೆಸಿವಿರ್ (Remdesivir) ಎಂಬ ಲಸಿಕೆಯನ್ನು ನಕಲಿ ಸೃಷ್ಟಿ ಮಾಡಿ ಹಾಕುತ್ತಿದ್ದ ನರ್ಸನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ.

ಮೈಸೂರಿನಲ್ಲಿ ಕೊರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂಬುದನ್ನು ಅರಿತ ಗಿರೀಶ್ ಎಂಬ ನರ್ಸ್ ಒಂದಿಷ್ಟು ಉಪ್ಪು ನೀರು ಮತ್ತು ಆಂಟಿಬಯಾಟಿಕ್ಸ್ ನ ಬೆರೆಸಿ ಅದಕ್ಕೆ ರೆಮ್ ಡೆಸಿವಿರ್ ಲೇಬಲ್ ಅಂಟಿಸಿ ಅದನ್ನು ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಮಾರಾಟ ಮಾಡುತ್ತಿದ್ದ.

ಈ ಕುರಿತು ಮೈಸೂರಿನ ಪೊಲೀಸ್ ಕಮೀಷನರ್ ಚಂದ್ರಗುಪ್ತ ಅವರಿಗೆ ನೇರವಾಗಿ ಮಾಹಿತಿ ತಲುಪಿತು. ಕೂಡಲೇ ಅವರು ರೇಡ್ ಮಾಡಿದಾಗ ಸ್ವತಃ ಅವರಿಗೇ ನಂಬಲಿಕ್ಕೆ ಆಗಲಿಲ್ಲ. ಅಷ್ಟೊಂದು ಬಾಟಲ್ ಗಳನ್ನು ಆಗಲೇ ನರ್ಸ್ ಗಿರೀಶ್ ರೆಡಿ ಮಾಡಿಟ್ಟಿದ್ದ. 2020ನೇ ಇಸವಿಯಿಂದಲೇ ನರ್ಸ್ ಗಿರೀಶ್ ಈ ಅಡಾವುಡಿ ಕೆಲಸವನ್ನು ಮಾಡುತ್ತಿದ್ದನಂತೆ. ಪಾಪ ಅದೆಷ್ಟು ಜನರು ಈತನ ಈ ದರಿದ್ರ ಔಷಧಿಯನ್ನು ಸೇವಿಸಿದ್ದಾರೋ ಏನು ಕತೆಯೋ?

ಜೆ.ಎಸ್.ಎಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಗಿರೀಶ್ ತಾನು ಕೆಡೋದಲ್ಲದೆ ತನ್ನ ಜೊತೆಲಿರೋ ನರ್ಸ್ ಗಳನ್ನೆಲ್ಲಾ ಈ ದಂಧೆಗೆ ಇಳಿಯುವಂತೆ ಪ್ರೇರೇಪಿಸಿದ್ದ. ಆದರೆ ಕೆಲವರಷ್ಟೇ ಈತನ ಜೊತೆಗೆ ಕೈ ಜೋಡಿಸಿದ್ದರು. ಸದ್ಯ ಪೊಲೀಸರು ಈತನನ್ನು ಬಂಧಿಸಿದ್ದು ಒಳ್ಳೇದಾಯಿತು. ಇಲ್ಲ ಅಂದಿದ್ರೆ ಇನ್ನೂ ಅದೆಷ್ಟು ಜನರಿಗೆ ಈ ನಕಲಿ ಔಷಧಿಯನ್ನು ಕುಡಿಸುತ್ತಿದ್ದನೋ.

ಇನ್ನಾದರೂ ಜನರು ಸ್ವಲ್ಪ ಎಚ್ಚರದಿಂದ ಇರಬೇಕು. ಒಳ್ಳೆ ಮೆಡಿಕಲ್ ಸ್ಟೋರ್ ನಲ್ಲಿ ಔಷಧಿಯನ್ನು ಖರೀದಿ ಮಾಡಬೇಕು ಮತ್ತು ಅದು ಅಸಲಿಯೋ ನಕಲಿಯೋ ಎನ್ನುವುದನ್ನು ವೈದ್ಯರ ಸಮೀಪವೇ ಹೋಗಿ ಪರೀಕ್ಷೆ ಮಾಡಿಸಿ ನಂತರ ತೆಗೆದುಕೊಳ್ಳಬೇಕು.

Leave a Reply

Your email address will not be published. Required fields are marked *