ಹಾಯ್ ಬೆಂಗಳೂರ್

ಕೋವಿಡ್ ಇದೆ ಅಂತ ತಂದೆಯನ್ನು ಕೂಡಿ ಹಾಕಿ ಹೋಗಿದ್ದ ಮಕ್ಕಳು

ಕೋವಿಡ್ ಭೀತಿ ದೇಶದ ಜನರನ್ನು ಯಾವ ಪರಿ ಕಾಡುತ್ತಿದೆ ಅಂದರೆ ದೆಹಲಿಯಲ್ಲಿ ನಡೆದಿರುವ ಈ ಘಟನೆಯನ್ನು ನೋಡಿದರೆ ಅರ್ಥವಾಗುತ್ತದೆ. ಇವರ ಹೆಸರು ಮುರಳೀಧರ್.  ವಯಸ್ಸು ಎಂಬತ್ತು. ದೆಹಲಿಯ ಓಲ್ಡ್ ರಾಜೇಂದರ್ ನಗರ್ ನಿವಾಸಿ. ಮೂರು ಹೆಣ್ಣು ಮಕ್ಕಳ ಪೈಕಿ ಒಬ್ಬಾಕೆ ವಿದೇಶದಲ್ಲಿ ವಾಸವಿದ್ದರೆ. ಇನ್ನುಳಿದಿಬ್ಬರು ಇಲ್ಲೇ ದೆಹಲಿಯಲ್ಲಿದ್ದಾರೆ. ಇವರಿಗೆ ವೈರಸ್ ಇದೆ ಅಂತ ಗೊತ್ತಾದ ಕೂಡಲೇ ಯಾರೂ ಇವರ ಹತ್ತಿರಕ್ಕೆ ಬರಲಿಲ್ಲ. ಹತ್ತಿರಕ್ಕೆ ಬರುವುದಿರಲಿ, ಒಂದು ಮನೆಯಲ್ಲಿ ಕೂಡಿ ಹಾಕಿ ಹೊರಟು ಹೋಗಿದ್ದಾರೆ.

ಹಾಗೆ ಇವರನ್ನು ಬಿಟ್ಟು ಹೋದವರು ಬಾಗಿಲಿನ ಮೇಲೆ ಏನೆಂದು ಬರೆದಿದ್ದರು ಗೊತ್ತಾ?

“ಒಂದು ವೇಳೆ ನಾನೇನಾದರು ಸತ್ತರೆ ನನ್ನ ದೇಹವನ್ನು ಪೊಲೀಸರಿಗೆ ಒಪ್ಪಿಸಿಬಿಡಿ” – ಹೀಗಂತ ಬರೆದು ಅದನ್ನು ಬಾಗಿಲಿಗೆ ಅಂಟಿಸಿದ್ದರು. ಅಷ್ಟಕ್ಕೂ ಮುರಳೀಧರ್ ಯಾರೋ ಅಬ್ಬೇಪಾರಿ ಅಲ್ಲ. ನಿವೃತ್ತ ಸಿಐಡಿ ಅಧಿಕಾರಿ.

ಈ ಬೋರ್ಡನ್ನು ಓದಿದ ಪಕ್ಕದ ಮನೆಯವರು ಪೊಲೀಸರಿಗೆ ಫೋನ್ ಮಾಡಿದ್ದಾರೆ. ಪೊಲೀಸರು ಬಂದು ಬಾಗಿಲನ್ನು ತೆಗೆಸಿದ್ದಾರೆ. ನಂತರ ಇಬ್ಬರು ಹೆಣ್ಣು ಮಕ್ಕಳಿಗೂ ಫೋನ್ ಮಾಡಿದ್ದಾರೆ. ಕಡೆಗೆ ಒಬ್ಬಾಕೆ ಬಂದು ತಂದೆಯನ್ನು ಕರೆದುಕೊಂಡು ಹೋಗಿ ಲೋಹಿಯಾ ಆಸ್ಪತ್ರೆಗೆ ಅಡ್ಮಿಟ್ ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಎಂಥೆಂಥ ಮಕ್ಕಳಿರುತ್ತಾರೆ ನೋಡಿ.

Leave a Reply

Your email address will not be published. Required fields are marked *