ಹಾಯ್ ಬೆಂಗಳೂರ್

ಕಾಂಗ್ರೆಸ್ ಪಕ್ಷಕ್ಕೆ ಸರಿಯಾಗಿ ಟಾಂಗ್ ನೀಡಿದ ಕಟೀಲು

ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ ಮತ್ತು ಹೈಕಮಾಂಡ್ ಗೆ ಈಶ್ವರಪ್ಪ ಪತ್ರ ಬರೆದು ದೂರು ನೀಡಿದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ನಮ್ಮೊಳಗೆ ಕೆಲ ಭಿನ್ನಾಭಿಪ್ರಾಯಗಳು ಇರೋದು ಉಂಟು. ನಾವು ಅದನ್ನು ದೊಡ್ಡವರ ಸಮ್ಮುಖದಲ್ಲಿ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ. ಎಲ್ಲಿ ಭಿನ್ನಾಭಿಪ್ರಾಯ ಇಲ್ಲ ಅಂತ ತೋರಿಸಿ ಅಂತ ಹೇಳಿದ್ದಾರೆ.

ಬಿಜೆಪಿ ವಿರುದ್ಧ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷದಲ್ಲೇ ಮೊದಲು ಎಲ್ಲವೂ ಸರಿ ಇಲ್ಲ. ನಮ್ಮಲ್ಲಾದರೂ ಸಮಸ್ಯೆಗಳಾದರೆ ಅದನ್ನು ಸರಿಪಡಿಸುವ ವ್ಯವಸ್ಥೆ ಇದೆ. ಆದರೆ ಕಾಂಗ್ರೆಸ್ ನಲ್ಲಿ ಆ ವ್ಯವಸ್ಥೆಯೇ ಇಲ್ಲ ಅಂತ ಟಾಂಗ್ ನೀಡಿದ್ದಾರೆ. ಗುಲ್ಬರ್ಗಾದಲ್ಲಿ ಮಾತನಾಡಿದ ಕಟೀಲು ಈಶ್ವರಪ್ಪ ಮಾಡಿಟ್ಟಿರುವ ಯಡವಟ್ಟಿಗೆ ತೇಪೆ ಹಾಕಿದ್ದಾರೆ. ಇನ್ನೇನು ಎರಡು ದಿನಗಳಲ್ಲಿ ಎಲ್ಲ ಸಮಸ್ಯೆಗಳೂ ಬಗೆಹರಿಯುತ್ತವೆ ಅಂತ ಮಾಧ್ಯಮದವರಿಂದ ಜಾರಿಕೊಂಡಿದ್ದಾರೆ.

ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ನಮ್ಮ ಮನೆಯಲ್ಲಿ ಹೊಗೆ ಆಡ್ತಿರೋದು ನಿಜ. ಆದರೆ ಅವರ ಮನೆಯಲ್ಲಿ ಬೆಂಕಿಯೇ ಬಿದ್ದಿದೆ. ಡಿ.ಕೆ.ಶಿವಕುಮಾರ್ ಮೊದಲು ಅದನ್ನು ನೋಡಲಿ ಅಂತ ಕಟೀಲು ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *