ಹಾಯ್ ಬೆಂಗಳೂರ್

ಥಿಯೇಟರ್ ಗೆ ಹೋಗೋರು ಮೊದಲು ಕೋವಿಡ್ ನೆಗೆಟಿವ್ ರಿಪೋರ್ಟ್ ತೆಗೆದುಕೊಂಡು ಹೋಗಬೇಕಂತೆ

ರೋಹಿಣಿ ಸಿಂಧೂರಿ ಎಂಬ ಮೈಸೂರಿನ ಡೀಸಿಗೆ ಅದ್ಯಾರು ಐ.ಎ.ಎಸ್ ಪಾಸ್ ಮಾಡಿದರೋ ಗೊತ್ತಿಲ್ಲ. ಸಣ್ಣ ಮಟ್ಟಿಗಿನ ಕಾಮನ್ ಸೆನ್ಸ್ ಕೂಡ ಇಲ್ಲದೆ ವರ್ತಿಸುತ್ತಿದ್ದಾರೆ. ಸಿನೆಮಾ ನೋಡೋಕೆ ಥಿಯೇಟರ್ ಗೆ ಹೋಗೋರು ಕೋವಿಡ್ ರಿಪೋರ್ಟ್ ತೆಗೆದುಕೊಂಡು ಹೋಗಬೇಕಂತೆ. ಅಂದರೆ ನಾಳೆ ಸಿನೆಮಾ ನೋಡಬೇಕು ಅಂದರೆ ಅದು ಸಾಧ್ಯವಿಲ್ಲ. ನೀವು ಮೊದಲು ಕೋವಿಡ್ ಸೆಂಟರ್ ಗೆ ಹೋಗಿ ಅಲ್ಲಿ ಕಾದು ಸ್ಯಾಂಪಲ್ಸ್ ಕೊಟ್ಟು ನಂತರ ರಿಪೋರ್ಟ್ ಪಡೆದುಕೊಂಡು (ಅದರಲ್ಲಿ ನೆಗೆಟಿವ್ ಬಂದಿದ್ದರೆ ಮಾತ್ರ) ಥಿಯೇಟರ್ ಗೆ ಹೋಗಬೇಕು.

ತಮಾಷೆ ಏನಪ್ಪಾ ಅಂದ್ರೆ ಥಿಯೇಟರ್ ಗೇಟ್ ಕೀಪರ್ ಎಂಬ ಬಡಪಾಯಿ ಆಸಾಮಿಗೆ ಟಿಕೆಟ್ ನೋಡಿ ಒಳಕ್ಕೆ ಬಿಡೋದು ಬಿಟ್ಟು ಕೋವಿಡ್ ರಿಪೋರ್ಟ್ ನೋಡಿಕೊಂಡು ಒಳಕ್ಕೆ ಬಿಡಬೇಕಾದ ಪರಿಸ್ಥಿತಿ ಬಂತು. ಅಷ್ಟಕ್ಕೂ ಅವನಿಗೆ ರಿಪೋರ್ಟ್ ಪಾಸಿಟಿವ್ ಬಂದಿದೆಯೋ, ನೆಗೆಟಿವ್ ಬಂದಿದೆಯೋ ಅಂತ ಹೇಗೆ ಗೊತ್ತಾಗಬೇಕು. ಇದನ್ನ ಶ್ರೀಮತಿ ರೋಹಿಣಿ ಸಿಂಧೂರಿ ಎಂಬ ಬುದ್ಧಿವಂತ ಡೀಸಿಯೇ ಹೇಳಬೇಕು.

ಇನ್ನು ಮದುವೆ ಮತ್ತು ಇತರೆ ಸಮಾರಂಭಗಳಿಗೂ ಜನರು ಹೋಗುವಂತಿಲ್ಲ. ಇಷ್ಟು ದಿನ ದಿಮ್ ರಂಗ ಅಂತ ಜನ ಓಡಾಡಿಕೊಂಡಿದ್ದರು. ಆದರೆ ಅಲ್ಲಿಗೂ ಕೋವಿಡ್ ರಿಪೋರ್ಟ್ ತೆಗೆದುಕೊಂಡು ಹೋಗಬೇಕಂತೆ. ಒಂದು ವೇಳೆ ಕೋವಿಡ್ ಟೆಸ್ಟ್ ಮಾಡಿಸೋಕೆ ಹೋದರೆ ಅದು ಬರೋದು ಪಾಸಿಟಿವ್  ಅಂತಲೇ. ಯಾವುದೇ ಕಾರಣಕ್ಕೂ ಅದು ನೆಗೆಟಿವ್ ತೋರಿಸೋದಿಲ್ಲ. ಹೀಗಾಗಿ ಜನರು ಹೆದರಿಕೊಂಡು ಎಲ್ಲಿ ನಮಗೂ ಪಾಸಿಟಿವ್ ಬಂದುಬಿಡುತ್ತೋ, ಈ ಸಿನೆಮಾ ಸಹವಾಸವೇ ಬೇಡ ಅಂತ ಸುಮ್ಮನಾಗಿಬಿಡುತ್ತಾರೆ. ಅಲ್ಲಿಗೆ ಕೋಟಿ ಕೋಟಿ ಸುರಿದು ಸಿನೆಮಾ ತೆಗೆದ ನಿರ್ಮಾಪಕ ಬಾಯಿಗೆ ಮಣ್ಣು ಬಿದ್ದಂತೆಯೇ ಆಯಿತು.

Leave a Reply

Your email address will not be published. Required fields are marked *