ಹಾಯ್ ಬೆಂಗಳೂರ್

ಮಹಾಮಾರಿ ಕೋವಿಡ್‌ಗೆ ಮಕ್ಕಳೇ ಟಾರ್ಗೆಟ್: ಎಚ್ಚರಕೆ ವಹಿಸಿ!

ಕೊರೋನಾ ಎರಡನೇ ಅಲೆಗೆ ಐದರಿಂದ ಹನ್ನೆರಡು ವರ್ಷ ವಯಸ್ಸಿನ ಮಕ್ಕಳು ತುತ್ತಾಗುತ್ತಾರೆ ಅಂತ ವೈದ್ಯರು ಹೇಳುತ್ತಿದ್ದಾರೆ. ನವಜಾತ ಶಿಶುಗಳು ಮತ್ತು ಒಂದು ವರ್ಷದೊಳಗಿನ ಮಕ್ಕಳಿಗೂ ದೆಹಲಿಯಲ್ಲಿ ಕೋವಿಡ್ ಟೆಸ್ಟ್ ಮಾಡಿಸುತ್ತಿದ್ದಾರಂತೆ.

ದೆಹಲಿಯ ಮಧುಕರ್ ರೇನ್ ಬೋ ಚಿಲ್ಡ್ರನ್ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಲ್ಲಿ ಐವತ್ತು ಮಕ್ಕಳಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಪರಿಸ್ಥಿತಿ ತುಂಬಾನೇ ಕೆಟ್ಟದಾಗಿದೆ. ತಂದೆ ತಾಯಂದಿರು ಆದಷ್ಟು ಕೇರ್ ತೆಗೆದುಕೊಳ್ಳಬೇಕು. ದೆಹಲಿಯ ಒಂದು ಆಸ್ಪತ್ರೆಯಲ್ಲಿ ಒಂದು ಚಿಕ್ಕ ಹುಡುಗಿಗೆ ವೆಂಟಿಲೇಟರ್ ನ ಅವಶ್ಯಕತೆ ಕಂಡು ಬಂತು. ಆಕೆಯ ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ.

ಕಳೆದ ಬಾರಿ ಕೇವಲ ಹನ್ನೊಂದು ಪರ್ಸೆಂಟ್ ನಷ್ಟು ಮಕ್ಕಳಿಗೆ ಮಾತ್ರ ಕೋವಿಡ್ ಪಾಸಿಟಿವ್ ಕಂಡು ಬಂದಿತು. ಆದರೆ ಈ ಬಾರಿ ಇಪ್ಪತ್ತರಿಂದ ನಲವತ್ತು ಪರ್ಸೆಂಟ್ ಮಕ್ಕಳಲ್ಲಿ ಕೋವಿಡ್ ಕಂಡು ಬರುತ್ತಿದೆ ಅಂತ ವೈದ್ಯರು ಹೇಳುತ್ತಿದ್ದಾರೆ.

ಕೊರೋನಾ ರೂಪಾಂತರಗೊಂಡಿರೋದು, ಮನೆಯಲ್ಲಿ ಜಾಸ್ತಿ ಎಚ್ಚರಿಕೆ ವಹಿಸದೇ ಇರುವುದು, ಹೊರಗಡೆ ವಾತಾವರಣಕ್ಕೆ ಎಕ್ಸ್ ಪೋಸ್ ಆಗುವುದು ಮತ್ತು ಮಕ್ಕಳಿಗೆ ಇನ್ನೂ ಕೋವಿಡ್ ಲಸಿಕೆ ಹಾಕಿಸದೆ ಇರುವುದೇ ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಳ್ಳೋದಕ್ಕೆ ಪ್ರಮುಖ ಕಾರಣ ಅಂತ ವೈದ್ಯರು ಹೇಳುತ್ತಾರೆ.

ಮಕ್ಕಳಲ್ಲಿ ಕೋವಿಡ್ ಸೋಂಕಿನ ಲಕ್ಷಣಗಳು ಅಂದರೆ ವಾಂತಿ, Rashes ಆಗುವುದು ಕಣ್ಣಿನ ಇನ್ಫೆಕ್ಷನ್, ಬ್ಲಡ್ ವೆಸೆಲ್ ಗಳಲ್ಲಿ ಇನ್ ಫ್ಲಮೇಷನ್ ಆಗುವುದು, ಜ್ವರ, ಕೆಮ್ಮು – ಇವಿಷ್ಟು ಮಕ್ಕಳಲ್ಲಿ ಕೋವಿಡ್ ಬರುತ್ತಿದೆ ಅನ್ನುವ ಗುಣಲಕ್ಷಣಗಳು.

ಇಂಥದ್ದೇನಾದರೂ ಆದರೆ ಮೊದಲು ವೈದ್ಯರ ಬಳಿಗೆ ಕರೆದುಕೊಂಡು ಹೋಗಿ. ಇಲ್ಲ ಅಂದರೆ ಮಲ್ಟಿಸಿಸ್ಟಮ್ ಇನ್ ಫ್ಲಮೇಟರಿ ಸಿಂಡ್ರೋಮ್ ಆಗುತ್ತದೆ ಅಂತ ಡಾ. ಬಗಾಯ್  ಹೇಳುತ್ತಾರೆ.

Leave a Reply

Your email address will not be published. Required fields are marked *