ಹಾಯ್ ಬೆಂಗಳೂರ್

ಕೋವಿಡ್ ಎರಡನೇ ಅಲೆ ಭೀತಿ: ಹತ್ತನೇ ಮತ್ತು ಹನ್ನೆರಡನೇ ಕ್ಲಾಸ್ ನ ಪರೀಕ್ಷೆ ಮುಂದೂಡಿದ ಸಿಬಿಎಸ್ಸಿ

ದೇಶಾದ್ಯಂತ ಕೋವಿಡ್ ಮಹಾಮಾರಿಯ ಅಟ್ಟಹಾಸದಿಂದ ಜನರು ಹೆದರಿರೋದು ಗೊತ್ತೇ ಇದೆ. ಸಿ.ಬಿ.ಎಸ್.ಸಿ. ಬೋರ್ಡ್ ಕೂಡ ಆತಂಕಗೊಂಡಿದ್ದು ಯಾವುದೇ ಕಾರಣಕ್ಕೂ ರಿಸ್ಕೇ ಬೇಡ ಅಂತ ಹತ್ತನೇ ಕ್ಲಾಸ್ ಮತ್ತು ಹನ್ನೆರಡನೇ ಕ್ಲಾಸ್ ಪರೀಕ್ಷೆಗಳನ್ನ ಪೋಸ್ಟ್ ಪೋನ್ ಮಾಡಿಬಿಟ್ಟಿದೆ.

ಅಸಲಿಗೆ 21,50,761 ವಿದ್ಯಾರ್ಥಿಗಳು ಹತ್ತನೇ ಕ್ಲಾಸ್ ಪರೀಕ್ಷೆ ಬರೆಯಬೇಕಾಗಿತ್ತು. ಅಂತೆಯೇ 14,30,243 ಮಂದಿ ಪಿ.ಯು.ಸಿ. ಪರೀಕ್ಷೆ ತೆಗೆದುಕೊಳ್ಳುವವರಿದ್ದರು. ಅವರೆಲ್ಲರಿಗೂ ಈಗ ಒಂದಷ್ಟು ಹೆಚ್ಚು ಕಾಲಾವಕಾಶ ಸಿಕ್ಕಿದಂತಾಗಿದೆ.

ಈ ಬಗ್ಗೆ ಕೇಂದ್ರ ಸಚಿವ ರಮೇಶ್ ಪೋಕ್ರಿಯಾಲ್ ಮಾತನಾಡಿದ್ದು ಮಕ್ಕಳ ವಿಷಯದಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಬೇಡ. ಸಿ.ಬಿ.ಎಸ್.ಸಿ. ಬೋರ್ಡ್ ಈ ವಿಚಾರದಲ್ಲಿ ತೆಗೆದುಕೊಂಡಿರುವ ನಿರ್ಧಾರ ನೂರಕ್ಕೆ ನೂರರಷ್ಟು ಸರಿಯಾಗೇ ಇದೆ ಅಂತ ಹೇಳಿದ್ದಾರೆ.

ಒಟ್ಟಿನಲ್ಲಿ ಜನರಿಂದ ಹಿಡಿದು ಸರ್ಕಾರದ ಅಧಿಕಾರಿಗಳು, ಮಂತ್ರಿ ಮಹೋದಯರ ತನಕ ಪ್ರತಿಯೊಬ್ಬರೂ ಹೈರಾಣಾಗಿ ಹೋಗಿದ್ದಾರೆ. ಕೋವಿಡ್ ಎಂಬ ಹೆಸರು ಕಿವಿಗೆ ಬಿದ್ದರೆ ಸಾಕು ನಿದ್ದೆಯಲ್ಲೂ ಬೆಚ್ಚಿ ಬೀಳುತ್ತಾರೆ.

-for-class-x-and-xii

Leave a Reply

Your email address will not be published. Required fields are marked *