ಹಾಯ್ ಬೆಂಗಳೂರ್

ಎಸೆಸೆಲ್ಸಿ ವಿದ್ಯಾರ್ಥಿಗಳ ಬೇಡಿಕೆ ತಳ್ಳಿಹಾಕಿದ ಸಿಬಿಎಸ್ಸಿ-ಐಸಿಎಸ್ಸಿ ಬೋರ್ಡ್

ಕೊರೋನಾದ ಎರಡನೇ ಅಲೆ ವಿದ್ಯಾರ್ಥಿಗಳನ್ನು ಕಂಗಾಲಾಗಿಸಿದೆ. ಅದರಲ್ಲೂ ಇನ್ನೇನು ಎಸೆಸೆಲ್ಸಿ ಪರೀಕ್ಷೆ ಬೇರೆ ಸಮೀಪಿಸುತ್ತಿರುವುದರಿಂದ ಐಸಿಎಸ್ಸಿ ಮತ್ತು ಸಿಬಿಎಸ್ಸಿ ಬೋರ್ಡ್ ಗೆ ಹತ್ತನೇ ತರಗತಿ ವಿದ್ಯಾರ್ಥಿಗಳು ಪತ್ರ ಬರೆದಿದ್ದಾರೆ. ದಯವಿಟ್ಟು ಪರೀಕ್ಷೆ ಪೋಸ್ಟ್ ಪೋನ್ ಮಾಡಿ ಅಂತ ಪಟ್ಟು ಹಿಡಿದಿದ್ದಾರೆ.

ಸುಮಾರು ಒಂದು ಲಕ್ಷ ಜನ ಹೀಗೆ ಬೇಡಿಕೆ ಸಲ್ಲಿಸಿರುವುದನ್ನು ನೋಡಿ ಸಿಬಿಎಸ್ಸಿ ಮತ್ತು ಐಸಿಎಸ್ಸಿ ಬೋರ್ಡ್ ಗಳು ಚಿಂತೆಗೆ ಬಿದ್ದಿವೆ. ಆದರೆ ವಿದ್ಯಾರ್ಥಿಗಳ ಬೇಡಿಕೆಗಳನ್ನು ಪರಿಗಣಿಸಲು ಬೋರ್ಡ್ ತಯಾರಿಲ್ಲ. ಸರಿಯಾಗಿ ರೂಲ್ಸ್ ಗಳನ್ನು (ಕೋವಿಡ್ ನೀತಿ ನಿಯಮಗಳನ್ನು) ಫಾಲೋ ಮಾಡಿದರೆ ಪರೀಕ್ಷೆ ಬರೆಯೋಕೆ ಏನೂ ಸಮಸ್ಯೆ ಆಗೋಲ್ಲ ಅಂತ ಹೇಳುವ ಮೂಲಕ ವಿದ್ಯಾರ್ಥಿಗಳ ಮನವಿಯನ್ನು ಪರಿಗಣಿಸುವುದಿಲ್ಲ ಅಂತ ಸ್ಪಷ್ಟವಾಗಿ ಹೇಳಿದೆ.

ಟ್ವಿಟ್ಟರ್ ನಲ್ಲಿ ಹ್ಯಾಷ್ ಟ್ಯಾಗ್ ನ ಆರಂಭಿಸಿ ಅದರೊಳಗೆ ಅಭಿಯಾನ ಆರಂಭಿಸಿದ್ದರು ವಿದ್ಯಾರ್ಥಿಗಳು. ಕಳೆದ ಎರಡು ದಿನಗಳಿಂದ ಈ ಅಭಿಯಾನ ಉಳಿದ ಎಸೆಸೆಲ್ಸಿ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟು ಮಾಡಿತ್ತು. ಇದೀಗ ಎಲ್ಲ ಗೊಂದಲ ಬಗೆಹರಿದಿದ್ದು ಮಂಡಳಿ ಹೇಳಿದ ದಿನಾಂಕಕ್ಕೆ ಪರೀಕ್ಷೆ ನಡೆಯಲಿದೆ.

Leave a Reply

Your email address will not be published. Required fields are marked *