ಹಾಯ್ ಬೆಂಗಳೂರ್

ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರನಿದ್ದ ಕಾರು ಅಪಘಾತ; ಇಬ್ಬರ ದುರ್ಮರಣ

ಅದ್ಯಾಕೋ ಏನೋ ವಿನಯ್ ಕುಲಕರ್ಣಿ ಮತ್ತವರ ಕುಟುಂಬಸ್ಥರ ಟೈಂ ಸರಿ ಇದ್ದಂತೆ ಕಾಣಿಸುತ್ತಿಲ್ಲ. ಅದ್ಯಾವ ಟೆನ್ಷನ್ ನಲ್ಲಿ ಇದ್ರೋ ಏನು ಕಥೆಯೋ ಅವರ ತಮ್ಮ ವಿಜಯ್ ಕುಲಕರ್ಣಿಯವರು ಕೂಡ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ಅವರು ಪ್ರಯಾಣ ಮಾಡುತ್ತಿದ್ದ ಕಾರು ಭಾರಿ ಹಾನಿಯನ್ನುಂಟು ಮಾಡಿದೆ.

ವಿಜಯ್ ಕುಲಕರ್ಣಿ ಪ್ರಯಾಣ ಮಾಡುತ್ತಿದ್ದ ಕಾರು ಧಾರವಾಡ ನಗರದ ಕೆ.ವಿ.ಜಿ. ಬ್ಯಾಂಕ್ ಎದುರು ಅಪಘಾತಕ್ಕೀಡಾಗಿದೆ. ಕಾರು ಡಿಕ್ಕಿಯಾಗಿದ್ದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆರು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ. ಕಾರು ಡಿಕ್ಕಿಯಾಗಿದ್ದರಿಂದ ಕೆಲವು ಬೈಕ್ ಗಳು ಕೂಡ ಜಖಂಗೊಂಡಿವೆ.

ಅಪಘಾತದಲ್ಲಿ ಮೃತರಾದವರನ್ನು ಶೇಖರ್ (37) ಮತ್ತು ಚರಣ್ (17) ಎಂದು ಗುರುತಿಸಲಾಗಿದೆ. ಘಟನೆ ನಡೆದ ಕೂಡಲೇ ಕಂಗಾಲಾದ ವಿಜಯ್ ತಕ್ಷಣವೇ ಮತ್ತೊಂದು ಕಾರನ್ನು ತರಿಸಿಕೊಂಡು ಅದರಲ್ಲಿ ಪರಾರಿಯಾಗಿದ್ದಾರೆ. ಈ ಸಂಬಂಧ ಧಾರವಾಡ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *