ಹಾಯ್ ಬೆಂಗಳೂರ್

ಕೋವಿಡ್ ಲಸಿಕೆ ತೆಗೆದುಕೊಂಡವರು ಮದ್ಯಪಾನ ಮಾಡಬಹುದಾ?

ಕೋವಿಡ್ ಲಸಿಕೆ ತೆಗೆದುಕೊಂಡವರು ಆಲ್ಕೊಹಾಲ್ ಸೇವನೆ ಮಾಡಬಹುದಾ? ಇದೊಂದು ಪ್ರಶ್ನೆ ಅನೇಕರನ್ನು ಕಾಡುತ್ತಿತ್ತು. ಅದಕ್ಕೆ ವೈದ್ಯರೇ ಉತ್ತರ ಕೊಟ್ಟುಬಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಆ ಥರದ ಭಯವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಡಿ. ಕೋವಿಡ್ ಲಸಿಕೆಗೂ ಆಲ್ಕೊಹಾಲ್ ಸೇವನೆಗೂ ಸುತರಾಂ ಸಂಬಂಧ ಇಲ್ಲ ಅಂತ ಧೃಡೀಕರಿಸಿದ್ದಾರೆ.

ಒಂದು ವಿಷಯವನ್ನು ಗಮನದಲ್ಲಿ ಇರಿಸಿಕೊಳ್ಳಿ. ಬೇರೆ ಯಾವುದಾದರೂ ಅಲರ್ಜಿ ಇರುವವರು ಈ ಲಸಿಕೆಯನ್ನು ತೆಗೆದುಕೊಳ್ಳುವುದಕ್ಕೂ ಮೊದಲು ವೈದ್ಯರನ್ನು ಸಂಪರ್ಕ ಮಾಡಿ ಧೃಡೀಕರಣ ಪತ್ರವನ್ನು ಪಡೆಯಬೇಕು ಅಥವಾ ಯಾವ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎನ್ನುವುದನ್ನು ವೈದ್ಯರಿಂದ ಕೇಳಿ ತಿಳಿದುಕೊಳ್ಳಬೇಕು.

ಇನ್ನು ಸರ್ಟಿಫಿಕೇಟ್ ಕುರಿತು ಹೇಳುವುದಾದರೆ ಮೊದಲನೇ ಶಾಟ್ ಹಾಕಿಸಿಕೊಂಡ ಮೇಲೆ ಆರೋಗ್ಯ ಸೇತು App ಅಥವಾ cowin.gov.in ಎಂಬ ವೆಬ್ ಸೈಟ್ ನಿಮ್ಮ ಹೆಸರು, ವಯಸ್ಸು ಸೇರಿದಂತೆ ಅದು ಕೇಳುವ ವಿವರಗಳನ್ನೆಲ್ಲಾ ತುಂಬಿ ನಂತರ ಅದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *