ಹಾಯ್ ಬೆಂಗಳೂರ್

ಕೊರೋನಾ ಭೀತಿಯಿಂದ ಭಾರತ ಪ್ರವಾಸ ರದ್ದು ಮಾಡಿದ ಬ್ರಿಟನ್ ಪ್ರಧಾನಿ

ಕೊರೋನಾದ ಎರಡನೇ ಅಲೆಯ ಅಟ್ಟಹಾಸಕ್ಕೆ ಬ್ರಿಟನ್ ದೇಶದ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಹೆದರಿದ್ದಾರೆ. ಇತ್ತೀಚೆಗಷ್ಟೇ ಅವರಿಗೂ ಕೂಡ ಕೋವಿಡ್ ಸೋಂಕು ತಗುಲಿಕೊಂಡಿತ್ತು. ಹೀಗಾಗಿ ಅವರ ಭಾರತದ ಪ್ರವಾಸ ರದ್ದಾಗಿದೆ. ಈ ಸುದ್ದಿಯನ್ನು ಅವರೇ ಪ್ರಕಟಿಸಿದ್ದಾರೆ.

ಭವಿಷ್ಯದಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧ ಹೇಗಿರಬೇಕು, ವ್ಯವಹಾರ ಹೇಗೆ ನಡೆಯಬೇಕು ಎಂಬುದರ ಕುರಿತು ಅವರು ಚರ್ಚೆ ನಡೆಸಬೇಕಾಗಿತ್ತು. ಸದ್ಯಕ್ಕೆ ಬರುವುದಕ್ಕೆ ಆಗದ ಕಾರಣ ವರ್ಚುಯಲ್ ಮೀಟಿಂಗ್ ಮೂಲಕವೇ ಅವರಿಬ್ಬರು ಮಾತನಾಡಿಕೊಳ್ಳಲಿದ್ದಾರೆ.

ಬ್ರಿಟನ್ ಸರ್ಕಾರವಂತೂ ಜನರಿಗೆ ಪ್ರಯಾಣದ ಕುರಿತು ಕಟ್ಟುನಿಟ್ಟಾದ ಸೂಚನೆ ನೀಡಿಬಿಟ್ಟಿದೆ. ನಿಮಗೆ ಅತ್ಯಂತ ಅವಶ್ಯಕತೆ ಇದ್ದು ಹೋಗಲೇಬೇಕು ಅಂತ ಅನ್ನಿಸಿದರೆ ಮಾತ್ರ ಎಚ್ಚರಿಕೆ ವಹಿಸಿಕೊಂಡು ಹೋಗಿ. ಇಲ್ಲ ಅಂದ್ರೆ ಯಾವುದೇ ಕಾರಣಕ್ಕೂ ಎಲ್ಲಿಗೂ ಹೋಗಬೇಡಿ. ಸುಮ್ಮನೆ ಮನೆಯಲ್ಲೇ ಇರಿ ಅಂತ ಹೇಳಿಬಿಟ್ಟಿದೆ.

Leave a Reply

Your email address will not be published. Required fields are marked *