ಹಾಯ್ ಬೆಂಗಳೂರ್

ಬೇಲೂರು-ಹಳೇಬೀಡು ದೇಗುಲಕ್ಕೆ ಇನ್ನೂ ಹದಿನೈದು ದಿನ ನೋ ಎಂಟ್ರಿ

ಕೊರೋನಾ ಮಹಾಮಾರಿಯ ಅಟ್ಟಹಾಸ ದಿನದಿಂದ ದಿನಕ್ಕೆ ಕೈ ಮೀರುತ್ತಿರುವುದರಿಂದ ಎಲ್ಲ ಸಾರ್ವಜನಿಕ ಸ್ಥಳಗಳ ಮೇಲೆ ಸರ್ಕಾರ ನಿಗಾವಹಿಸಿದೆ. ಮೊದಲನೆಯದಾಗಿ ಐತಿಹಾಸಿಕ ದೇವಸ್ಥಾನಗಳಿಗೆ ಜನರು ಬರೋದನ್ನು ತಡೆಯುವ ಸಲುವಾಗಿ ಕಟ್ಟುನಿಟ್ಟಿನ ನಿಯಮವನ್ನು ಜಾರಿಗೊಳಿಸಲು ಮುಂದಾಗಿದೆ.

ಉಳಿದ ಜಿಲ್ಲೆಗಳ ದೇಗುಲದ ಪ್ರವೇಶಕ್ಕೆ ಕಡಿವಾಣ ಹಾಕುವುದಕ್ಕೂ ಮೊದಲು ಅದ್ಯಾಕೋ ಹಾಸನ ಜಿಲ್ಲೆಯ ಬೇಲೂರು-ಹಳೇಬೀಡಿನ ದೇವಸ್ಥಾನಗಳಿಗೆ ಭಕ್ತರು ಬರೋದಕ್ಕೆ ಸರ್ಕಾರ ಮೊದಲು ಕಡಿವಾಣ ಹಾಕಿದೆ. ಈ ಸಂಬಂಧ ಭಾರತೀಯ ಪುರಾತತ್ವ ಇಲಾಖೆಯು ಆದೇಶ ಹೊರಡಿಸಿದ್ದು ಮೇ ಹದಿನೈದನೇ ತಾರೀಖಿನ ತನಕ ಈ ಆದೇಶ ಜಾರಿಯಲ್ಲಿ ಇರುತ್ತದೆ ಅಂತ ಸೂಚಿಸಿದೆ.

ನಿನ್ನೆಯಷ್ಟೇ ಬೇಲೂರಿನ ಚನ್ನಕೇಶವ ದೇಗುಲದಲ್ಲಿ ಗರುಡ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗಿತ್ತು. ಸಾಂಕೇತಿಕವಾಗಿ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಆದರೆ ಸರ್ಕಾರದ ಆದೇಶದ ಮೇರೆಗೆ ಅದನ್ನು ಬಂದ್ ಮಾಡಲಾಗಿದೆ.

ಸರ್ಕಾರದ ಈ ದಿಢೀರ್ ಆದೇಶ ಎಷ್ಟೋ ಭಕ್ತಾದಿಗಳಿಗೆ ಈ ವಿಚಾರ ತಿಳಿಯದೆ ನಿರಾಶೆ ಉಂಟಾಯಿತು. ಬೇಲೂರು, ಹಳೇಬೀಡಿನ ದೇಗುಲ ನೋಡಬೇಕು, ದೇವರ ದರ್ಶನವನ್ನು ಪಡೆಯಬೇಕು ಅಂದರೆ ಭಕ್ತಾದಿಗಳು ಇನ್ನೂ ಹದಿನೈದು ದಿನಗಳ ಕಾಲ ಕಾಯಲೇಬೇಕು. ಸದ್ಯದ ಪರಿಸ್ಥಿತಿಯಲ್ಲಿ ಹದಿನೈದು ದಿನಗಳೇ ಆಗುತ್ತೋ ಅಥವಾ ತಿಂಗಳೇ ಆಗುತ್ತೋ ಆ ದೇವರೇ ಬಲ್ಲ.

 

 

Leave a Reply

Your email address will not be published. Required fields are marked *