ಹಾಯ್ ಬೆಂಗಳೂರ್

ಬೆಂಗಳೂರಿಗರು ನಾಳೆಯಿಂದ ಕತ್ತಲಿಗೂ ಮೊದಲೇ ಮನೆಗೆ ಸೇರಿಕೊಳ್ಳಿ

ಬೆಂಗಳೂರಿಗರೇ ಎಚ್ಚರ. ಬೆಂಗಳೂರಿಗರ ಜೊತೆಗೆ ಬೇರೆ ಊರಿನವರೆ ನೀವೂ ಕೂಡ ಎಚ್ಚರದಿಂದಿರಿ. ಯಾವುದೇ ಕಾರಣಕ್ಕೂ ಮೆಜೆಸ್ಟಿಕ್ ಕಡೆಗೆ ಹೋಗಬೇಡಿ. ಅದರಲ್ಲೂ ರಾತ್ರಿ ವೇಳೆಯಂತೂ ಹೋಗಲೇಬೇಡಿ. ಅಪ್ಪಿತಪ್ಪಿ ಹೋದಿರೋ ನೀವು ತಗಲಾಕಿಕೊಂಡು ಬಿಡ್ತೀರಾ. ಯಾಕೆಂದರೆ ನಾಳೆಯಿಂದ ಮೆಜೆಸ್ಟಿಕ್ ನಲ್ಲಿ ನೈಟ್ ಕರ್ಫ್ಯು.

ಕೊರೋನಾ ಅಲೆ ಬೆಂಗಳೂರಿನಲ್ಲಿ ಜಾಸ್ತಿಯಾಗುತ್ತಿರುವುದರಿಂದ ಘನ ಸರ್ಕಾರ ಇಂಥದ್ದೊಂದು ನಿರ್ಧಾರವನ್ನು ತೆಗೆದುಕೊಂಡಿದೆ. ಜನರು ಮೆಜೆಸ್ಟಿಕ್ ಗೆ ಬರಬಾರದು ಅಂದರೆ ಅವರು ಎಲ್ಲಿಗೆ ಹೋಗಬೇಕು. ಊರಿಗೆ ಹೋಗೋರು, ಊರಿನಿಂದ ಬರೋರು ಏನು ಮಾಡಬೇಕು ಎನ್ನುವುದರ ಬಗ್ಗೆ ಮಂತ್ರಿಗಳು ಸ್ಪಷ್ಟನೆ ನೀಡಿಲ್ಲ.

ಮೊನ್ನೆ ಬೆಂಗಳೂರಿನಲ್ಲಿ 6,970 ಕೇಸ್ ದಾಖಲಾಗಿತ್ತು. ನಿನ್ನೆ ಅದರ ಸಂಖ್ಯೆ ಕೊಂಚ ಇಳಿದಿತ್ತಾದರೂ 6,500 ಕೇಸ್ ಗಳು ಕಂಡು ಬಂದವು. ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಾಗುತ್ತಿದ್ದು ಮುಂದಿನ ಹತ್ತು ದಿನಗಳು ತುಂಬಾನೇ ನಿರ್ಣಾಯಕ ಅಂತ ಬಿ.ಬಿ.ಎಂ.ಪಿ. ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಎಲ್ಲ ಕಡೆ ಕಟ್ಟುನಿಟ್ಟನ ಕ್ರಮ ಕೈಗೊಳ್ಳಲಾಗುತ್ತಿದ್ದು ಆಸ್ಪತ್ರೆಗಳಲ್ಲಿ ಸೂಕ್ತ ಹಾಸಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಮಾರ್ಷಲ್ ಗಳು ಹದ್ದಿನ ಕಣ್ಣಿಟ್ಟುಕೊಂಡು ಎಲ್ಲೆಡೆ ಕಾಯುತ್ತಿರುತ್ತಾರೆ. ಯಾರು ಮಾಸ್ಕ್ ಹಾಕಿರೋದಿಲ್ವೋ ಅವರಿಗೆ ಫೈನ್ ಹಾಕಲಿದ್ದಾರೆ.

 

Leave a Reply

Your email address will not be published. Required fields are marked *