ಹಾಯ್ ಬೆಂಗಳೂರ್

ಅಪರಾಧ ಸಮಾಜದ ಒಂದು ಅವಿಭಾಜ್ಯ ಅಂಗವೇ?

   “ಎಲ್ಲಿ ನದಿಗಳು ಸ್ವಚ್ಛವಂದವಾಗಿ ತಮ್ಮ ಪಾತ್ರದಲ್ಲಿ ಹರಿಯುತ್ತವೋ , ಮೋಡಗಳು ಸ್ವಾರಸ್ಯವಾಗಿ ನರ್ತನಗೈದು ಮಳೆ ಸುರಿಸುತ್ತವೋ , ಭೂತಾಯಿ ಸಸ್ಯ ಶ್ಯಾಮಲೆಯಾಗಿ ತನ್ನ ಸೆರಗನ್ನ ಹಸಿರಿನಿಂದ ಹೊದಿಸಿ ಕೊಳ್ಳುತ್ತಾಳೋ , ಸುಳಿವ ತಣ್ಣಗಿನ ಗಾಳಿ ಮನುಜನಿಗೆ ಒಂದು ಸಮಂಜಸ ಅಪ್ಪುಗೆ ನೀಡುತ್ತೋ , ಅಲ್ಲೇ ಅಪರಾಧ ತಾಂಡವ ನಡೆಸುತ್ತೆ.”
                                        – ಎಡ್ವಿನ್ ಸದರ್ಲ್ಯಾಂಡ್ಸ್

– ಎಡ್ವಿನ್ ಸದರ್ಲ್ಯಾಂಡ್ಸ್

ಈ ಹೇಳಿಕೆಯನ್ನ ನೀಡಿದ್ದು  ಅಪರಾಧಶಾಸ್ತ್ರ ಪಿತಾಮಹ. ಕ್ರೈಮು ಅಂದರನೇ ಹಾಗೇನಾ , ಅದಕ್ಕೆ ಎಲ್ಲೆ  ಇಲ್ಲವಾ, ಅಪರಾಧಿಗಳು ಮನುಜರಲ್ವ ಅಥವಾ ಮನುಷ್ಯ ಯಾವತ್ತು ತಪ್ಪೇ ಮಾಡಲ್ವಾ ?

 ಮೋಡದ ಮಳೆ , ಸುಳಿವ ಗಾಳಿ, ಬಳಸಲು ನೀರು , ವ್ಯವಸಾಯ ಭೂಮಿ , ನದಿ ಹರಿವಿನ ಪಾತ್ರ , ಮಾನವರ ಒಡನಾಟ ನಾಗರೀಕತೆ ಉಗಮಿಸಿದ್ದೇ ಹೀಗೆ. ಯಾವ ಜಾಗದಲ್ಲಿ ಸೌಕರ್ಯಗಳು ಬಹುಬೇಗ ದೊರಕುತ್ತದೆ , ಅಲ್ಲೇ ನಾಗರೀಕ ಮುಖವಾಡ ಹೊತ್ತಂತ ಅನಾಗರೀಕರು ಜೀವಿಸೋದು, ಅಪರಾಧಗಳು ಆರಂಭವಾಗೋದು.
 ಬಹುಶಃ ಕತ್ತಲಿನ ಜಗತ್ತೇ ಬೆಳಗಿನ ಪ್ರಪಂಚದ ಪರಿಪೂರ್ಣ ಕಾಲವನ್ನ ನಿಯಂತ್ರಿಸುತ್ತೆ , ಅದಕ್ಕೆ ಅಪರಾಧವೂ ಒಂದು ಕಾರಣ. ಯಾವುದೋ ಒಂದು ಘನ ನ್ಯಾಯಾಲಯಕ್ಕೂ ಪರಿಹರಿಸಲು ಸಾಧ್ಯವಾಗದ ಕೇಸನ್ನ ಒಬ್ಬ ಡಾನ್ , ಬಾರಿನೊಳಗಿನ ಟೇಬಲ್ಲಿನ ಮೇಲೆ ರಾಜಿ ಮಾಡಿರುತ್ತಾನೆ. ನ್ಯಾಯಾಲಯ – ಪೋಲಿಸರ ಸ್ಟೇಷನ್ ಅಂತ ಇಬ್ಬರು ಕಕ್ಷಿದಾರರು ಹೋಗಿದ್ದರೆ ಅದು ಎಷ್ಟು ವರ್ಷಗಳು ಹಾಳಾಗುತ್ತಿದ್ದವೋ , ಅದು ಭಾರತೀಯರಿಗೆ ಚೆನ್ನಾಗಿ ಗೊತ್ತಿರವ ಸಂಗತಿ.
 ರೌಡಿಗಳಲ್ಲೂ ಒಳ್ಳೆಯವರು ಇದ್ದಾರೆ , ಜೊತೆ ನಾಗರೀಕ ಮನುಜರಲ್ಲೂ ಸಹ ಕೆಟ್ಟವರಿದ್ದಾರೆ. ಹೌದಲ್ವಾ , ಸಮಾಜ ಅಂದರೆ ಹಾಗೇ ಒಳ್ಳೆಯದು ಮತ್ತು ಕೆಟ್ಟದ್ದು ಕಲಬರಕೆ ಮಾಡಿದ ಚಿತ್ರಾನ್ನ ತರಹ.
 ವರುಣಕುಮಾರ ಟಿ. 
ಮಾನಸ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ
ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ

One thought on “ಅಪರಾಧ ಸಮಾಜದ ಒಂದು ಅವಿಭಾಜ್ಯ ಅಂಗವೇ?

Leave a Reply

Your email address will not be published. Required fields are marked *