ಹಾಯ್ ಬೆಂಗಳೂರ್

ನಕ್ಸಲರು ದಾಳಿ ಮಾಡಿದ ಜಾಗಕ್ಕೆ ಇಂದು ಅಮಿತ್ ಷಾ ಭೇಟಿ

ಬಿಹಾರದ ಬಸ್ತಾರ್ ನಲ್ಲಿ ನಿನ್ನೆ ನಡೆದ ನಕ್ಸಲರ ದಾಳಿಗೆ ಇಪ್ಪತ್ತೆರಡಕ್ಕೂ ಹೆಚ್ಚು ಯೋಧರು ಬಲಿಯಾಗಿರೋದು ಕೇಂದ್ರ ಸರ್ಕಾರವನ್ನು ಕೆರಳಿಸಿದೆ. ಈ ಸಂಬಂಧ ಕೇಂದ್ರ ಗೃಹಸಚಿವ ಅಮಿತ್ ಷಾ ಇಂದು ಛತ್ತೀಸ್ ಗಡಕ್ಕೆ ಆಗಮಿಸಿ ಅಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಲಿದ್ದಾರೆ.

ಮೊದಲು ನಕ್ಸಲರ ಗುಂಡೇಟಿಗೆ ಬಲಿಯಾಗಿರುವ 22 ಯೋಧರಿಗೆ ನಮನ ಸಲ್ಲಿಸಿ ನಂತರ ಉನ್ನತ ಮಟ್ಟದ ಸಭೆ ನಡೆಸಲಾಗುತ್ತದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸೇರಿದಂತೆ ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸಿ.ಆರ್.ಪಿ.ಎಫ್. ಯೋಧರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಇಲ್ಲಿ ಸಭೆ ಮುಗಿಸಿದ ಬಳಿಕ ಅಮಿತ್ ಷಾ ಚಾಪರ್ ನಲ್ಲಿ ಬಿಜಾಪುರದ ಬಸಾಗುಡ ಕ್ಯಾಂಪ್ ಗೆ ತೆರಳಿದ್ದಾರೆ. ಅಲ್ಲಿ ಊಟ ಮಾಡುತ್ತಾ ಪೊಲೀಸ್ ಅಧಿಕಾರಿಗಳು ಮತ್ತು ಸಿ.ಆರ್.ಪಿ.ಎಫ್. ಯೋಧರ ಜೊತೆಗೆ ಮಾತುಕತೆ ನಡೆಸಲಿದ್ದಾರೆ.

ಇದಾದ ಬಳಿಕ ಅವರು ರಾಯಪುರಕ್ಕೆ ಭೇಟಿ ನೀಡಿ ಅಲ್ಲಿನ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆಗಿರೋ ಗಾಯಾಳು ಯೋಧರನ್ನು ಕಂಡು ಧೈರ್ಯದ ಮಾತುಗಳನ್ನು ಹೇಳಲಿದ್ದಾರೆ. ನಂತರ ಸಂಜೆ 5.30ರ ವೇಳೆಗೆ ದೆಹಲಿಗೆ ವಾಪಸ್ ಆಗಲಿದ್ದಾರೆ.

Leave a Reply

Your email address will not be published. Required fields are marked *