ಹಾಯ್ ಬೆಂಗಳೂರ್

ತಮಿಳಿನ ಸ್ಟಾರ್ ನಟ ವಿಜಯ್ ಇಂದು ವೋಟ್ ಹಾಕಲು ಏನು ಮಾಡಿದರು ಗೊತ್ತಾ?

ಇವತ್ತು ಚೆನ್ನೈನ ನೀಲಂಕರೈ ಏರಿಯಾದಲ್ಲಿ ಜನರು ಒಂದು ಕ್ಷಣ ಅಚ್ಚರಿಗೆ ಒಳಗಾಗಿ ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದರು. ಅದಕ್ಕೆ ಕಾರಣ ಮಾಸ್ ನಟ, ಇಳಯದಳಪತಿ ವಿಜಯ್ ಸೈಕಲ್ ನಲ್ಲಿ ಬರುತ್ತಿದ್ದುದು. ಸ್ವತಃ ತಾವೇ ಪೆಡಲ್ ತುಳಿದುಕೊಂಡು ಯಂಗ್ ಹುಡುಗನನ್ನೂ ನಾಚಿಸುವಂತಿದ್ದರು ನಟ ವಿಜಯ್.

ಇವತ್ತು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ. ತಮ್ಮ ವೋಟ್ ಚಲಾಯಿಸಲು ವಿಜಯ್ ಎಂದಿನಂತೆ ಕಾರಿನಲ್ಲಿ ಹೋಗಬಹುದಾಗಿತ್ತು. ಆದರೆ ಅವರು ಮಾಸ್ ಹೀರೋ. ಸ್ವಲ್ಪ ಡಿಫರೆಂಟಾಗಿ ಇರೋಣ ಅಂತ ಸೈಕಲ್ ಮೇಲೆ ಹೊರಟುಬಿಟ್ಟರು. ಸುತ್ತಮುತ್ತಲೂ ಅವರ ಬಾಡಿಗಾರ್ಡ್ ಗಳಿಗೆ ಬೇಡ ಫಜೀತಿ. ಯಾಕಪ್ಪ ಈಯಪ್ಪ ಸೈಕಲ್ ಹೊಡೆಯುತ್ತಾ ನಮಗೆಲ್ಲಾ ಕಾಟ ಕೊಡುತ್ತಿದ್ದಾರೆ ಅಂತ ಬಾಡಿಗಾರ್ಡ್ ಗಳು ಮನಸ್ಸಿನಲ್ಲೇ ವಿಜಯ್ ಗೆ ಶಾಪ ಹಾಕಿಕೊಂಡಿರಬೇಕು.

ಹಾಕಿಕೊಳ್ಳದೆ ಇರುತ್ತಾರಾ ಮತ್ತೆ. ತಮಿಳುನಾಡಿನಲ್ಲಿ ನಟ ವಿಜಯ್ ಅಂದರೆ ಅದು ಎರಡನೇ ರಜಿನಿಕಾಂತ್ ಇದ್ದಂಗೆ. ಜನರು ಬೆಲ್ಲಕ್ಕೆ ಇರುವೆ ಮುತ್ತಿಕೊಂಡಂಗೆ ಮುತ್ತಿಕೊಂಡುಬಿಡುತ್ತಾರೆ. ಅವರನ್ನು ಮ್ಯಾನೇಜ್ ಮಾಡುವಷ್ಟರಲ್ಲಿ ಈ ಬಾಡಿಗಾರ್ಡ್ ಗಳು ಹೈರಾಣಾಗಿ ಹೋಗಲ್ವಾ.

ಇದಕ್ಕೂ ಮೊದಲು ತೆಯ್ಯಂಪೇಟ್ ಏರಿಯಾದಲ್ಲಿ ನಟ ಕಮಲ್ ಹಾಸನ್ ತಮ್ಮ ಪುತ್ರಿಯರಿಬ್ಬರೊಂದಿಗೆ ವೋಟ್ ಹಾಕಲು ಬಂದರು ಆಗಲೇ ಜನರನ್ನು ಕಂಟ್ರೋಲ್ ಮಾಡೋಕೆ ಆಗಲಿಲ್ಲ. ಇನ್ನೂ ವಿಜಯ್ ಬಂದರೆ, ಅದೂ ಸೈಕಲ್ ಹೊಡೆದುಕೊಂಡು ಬಂದರೆ ಜನ ಸುಮ್ಮನಿರುತ್ತಾರಾ. ಒಟ್ಟಿನಲ್ಲಿ ಇವತ್ತು ತಮಿಳುನಾಡಿನ, ಚೆನ್ನೈ ನಗರದ ಚುನಾವಣೆ ಸ್ಟಾರ್ ಗಳಿಂದ ರಂಗೇರಿತ್ತು ಅಂತಲೇ ಹೇಳಬಹುದು.

Leave a Reply

Your email address will not be published. Required fields are marked *