ಹಾಯ್ ಬೆಂಗಳೂರ್

ಶೀಘ್ರದಲ್ಲೇ ಹಿಂದಿಗೆ ರೀಮೇಕ್ ಆಗಲಿದೆ ACT 1978

ಲಾಕ್ ಡೌನ್ ಬಳಿಕ ಥಿಯೇಟರ್ ನಲ್ಲಿ ರಿಲೀಸ್ ಆದ ಮೊದಲ ಕನ್ನಡ ಚಿತ್ರ ಅಂದರೆ ಅದು ACT 1978.  ಮನ್ಸೋರ್ ನಿರ್ದೇಶದ ಈ ಚಿತ್ರದಲ್ಲಿ ಯಜ್ಞಾ ಶೆಟ್ಟಿ ಅಭಿನಯಿಸಿದ್ದರು. ಇದು ಈಗ ಶೀಘ್ರದಲ್ಲೇ ಹಿಂದಿಗೆ ರೀಮೇಕ್ ಆಗುತ್ತಿದೆ. ಅಷ್ಟೇ ಅಲ್ಲ ಅವಕಾಶ ಸಿಕ್ಕರೆ ತೆಲುಗು ಮತ್ತು ತಮಿಳಿಗೂ ರೀಮೇಕ್ ಆಗುತ್ತದೆ ಅಂತ ನಿರ್ದೇಶಕರು ಹೇಳಿದ್ದಾರೆ.

ಚಿತ್ರಕ್ಕೆ ಎಲ್ಲ ಕಡೆಯಿಂದ ಒಳ್ಳೆ ಪ್ರತಿಕ್ರಿಯೆ ಬಂದಿತು. ಅದೇ ವೇಳೆ ಹಿಂದಿಗೆ ರೀಮೇಕ್ ಮಾಡಲು ಒಳ್ಳೆಯ ಆಫರ್ ಕೂಡ ಬಂದಿತು. ಹಾಗಾಗಿ ರೀಮೇಕ್ ಮಾಡುತ್ತಿದ್ದೇವೆ ಅಂತ ಚಿತ್ರದ ಸ್ಕ್ರಿಪ್ಟ್ ಬರಹಗಾರ ವೀರೇಂದ್ರ ಮಲ್ಲಣ್ಣ ಖುಷಿಯಿಂದ ಹೇಳಿಕೊಂಡಿದ್ದಾರೆ.

ಹಿಂದಿಯಲ್ಲಿ ರೀಮೇಕ್ ಮಾಡುವಾಗ ಬಿಗ್ ಬಜೆಟ್ ಬೇಕಾಗುತ್ತದೆ. ಅಲ್ಲಿನ ನಿರ್ಮಾಪಕರ ಕೆಪಾಸಿಟಿಗೆ ತಕ್ಕ ಹಾಗೆ ನಾವು ಬದಲಾವಣೆ ಮಾಡಿಕೊಳ್ಳುತ್ತೇವೆ ಅಂತ ನಿರ್ದೇಶಕರು ಹೇಳಿದ್ದಾರೆ. ಒಟ್ಟಿನಲ್ಲಿ ಕನ್ನಡದ ಚಿತ್ರವೊಂದು ಹಿಂದಿಗೆ ರೀಮೇಕ್ ಆಗುತ್ತಿರುವುದು ನಿಜಕ್ಕೂ ಸಂತೋಷದ ವಿಷಯ.

Leave a Reply

Your email address will not be published. Required fields are marked *