ಹಾಯ್ ಬೆಂಗಳೂರ್

ಪರಿಷ್ಕೃತ ಮಾರ್ಗಸೂಚಿಯಲ್ಲಿ ಕಟ್ಟುನಿಟ್ಟಾದ ನಿಮಯಗಳಿವೆ ಗೊತ್ತಾ?

ಸೈಲೆಂಟ್ ಆಗಿ ಜನರ ಪ್ರಾಣವನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಕೊರೊನಾ ವೈರಸ್ ನಿರ್ಮೂಲನೆ ಮಾಡಲು ರಾಜ್ಯ ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಈ ಮೊದಲು ಸೆಕ್ಷನ್ 144 ರ ಪ್ರಕಾರ ರಾಜ್ಯ ಸರ್ಕಾರ ನಿಷೇಧಾಜ್ಞೆ ಜಾರಿಗೊಳಿಸಿತ್ತು. ಆದರೆ ಈಗ ಮೊದಲಿನ ಮಾರ್ಗಸೂಚಿಯಲ್ಲಿ ಹಲವು ಬದಲಾವಣೆ ತಂದು ಪರಿಷ್ಕೃತ ಮಾರ್ಗಸೂಚಿಯನ್ನು ಜಾರಿಗೊಳಿಸಿದೆ.

ಹಾಲು, ತರಕಾರಿ, ದಿನಸಿ, ಆಸ್ಪತ್ರೆ, ಮೆಡಿಕಲ್ ಸ್ಟೋರ್ ಸೇರಿದಂತೆ ಹಲವು ವ್ಯಾಪಾರ ವಹಿವಾಟಿಗೆ ರಾಜ್ಯ ಸರ್ಕಾರ ವಿನಾಯಿತಿ ನೀಡಿದೆ. ಆದರೆ ಉಳಿದ ಅಂಗಡಿ ಮುಂಗಟ್ಟಿನ ವ್ಯಾಪಾರಕ್ಕೆ 13 ದಿನಗಳ ಕಾಲ ನಿಷೇಧ ಹೇರಲಾಗಿದೆ. ಈ ಮೂಲಕ ರಾಜ್ಯದಲ್ಲಿ ಅಘೋಷಿತ ಲಾಕ್ ಡೌನ್ ಜಾರಿಗೊಳಿಸಿದೆ.
ಹೋಟೆಲ್ ಗಳನ್ನು ತೆರೆಯಬಹುದು. ಆದರೆ ಪಾರ್ಸಲ್ ಮಾತ್ರ ತೆಗೆದುಕೊಳ್ಳಬೇಕು. ಇನ್ನು ಗೋಬಿ, ಚಿರುಮುರಿ, ಪಾನಿಪೂರಿ ಸೇರಿದಂತೆ ಹಲವು ವ್ಯಾಪಾರಕ್ಕೆ ಬ್ರೇಕ್ ಹಾಕಲಾಗಿದೆ. ಸರ್ಕಾರದಿಂದ ಪರಿಷ್ಕೃತ ಮಾರ್ಗಸೂಚಿ ಪ್ರಕಟವಾಗುತ್ತಿದ್ದಂತೆ ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸತೊಡಗಿದ್ದಾರೆ. ಇದರಿಂದ ಎಲ್ಲ ಪ್ರದೇಶಗಳು ಬಿಕೋ ಎನ್ನುತ್ತಿವೆ.

Leave a Reply

Your email address will not be published. Required fields are marked *