ಹಾಯ್ ಬೆಂಗಳೂರ್

ಯಾರಿಗಾದರೂ ಕೊಡಬಹುದಾದ `ದಿ ಗಿಫ್ಟ್’

  • ಅರ್ಜೆಂಟಾಗಿ ಒಂದು ಮದುವೆಗೆ ಹೊರಟಿದ್ದೀರಿ. ವಧೂವರರು ಪರಿಚಿತರು. ಆದರೆ ಏನು ಗಿಫ್ಟ್ ಕೊಡಬೇಕು ಎಂಬುದು ತೋಚುವುದಿಲ್ಲ. ಒಂದು ಬಿಳೀ ಕವರಿನಲ್ಲಿ ಐದು ನೂರು ರುಪಾಯಿ ಇಟ್ಟುಕೊಟ್ಟು wish ಮಾಡಿಬಿಡುತ್ತೀರಿ. ಉಹುಂ, it’s bad. ಬದಲಿಗೆ ರಸ್ತೆ ಪಕ್ಕದಲ್ಲಿ ಸಿಗೋ ಒಂದು ಬೊಕೆ ಖರೀದಿಸಿ ಒಯ್ದು ಕೊಟ್ಟುಬಿಡುತ್ತೀರಿ. ಹೂಗುಚ್ಛ ಎಂಥದ್ದೇ ಆದರೂ ಮರುದಿನಕ್ಕೆ ಒಣಗಿ ಹೋಗುತ್ತದೆ.
  • ಬದಲಿಗೆ ಈ ಅರ್ಥಪೂರ್ಣ ಪುಸ್ತಕ ಕೊಡಿ. ಇದರ ಹೆಸರೇ `ದಿ ಗಿಫ್ಟ್’. ರವಿ ಬೆಳಗೆರೆ ಬರೆದ ಬರಹಗಳ ಮಧ್ಯದ ಅರ್ಥಪೂರ್ಣ ವಾಕ್ಯಗಳನ್ನು, ಬದುಕಿಗೆ ಸಂಬಂಧಿಸಿದ ಚೆಂದದ ನುಡಿಗಳನ್ನ, ಸಲಹೆಗಳನ್ನ ಆಯ್ದು, ಹೂಗಳ ಚಿತ್ರಗಳ ಸಮೇತ, ಆಕರ್ಷಕವಾಗಿ ವಿನ್ಯಾಸ ಮಾಡಿದ ಈ `ದಿ ಗಿಫ್ಟ್’ ನೀವು ಮದುವೆಯ ಸಂದರ್ಭದಲ್ಲೇ ಕೊಡಬೇಕು ಎಂದಿಲ್ಲ.
  • ನೂತನ ವಿವಾಹಿತರಿಗೆ, ಮನೆಗೆ ಬಂದ ಅತಿಥಿಗಳಿಗೆ, ಸಭೆಯ ಮುಖ್ಯ ಅತಿಥಿಗಳಿಗೆ, ಆಗಷ್ಟೆ ಕಾಲೇಜು ಸೇರ ಹೊರಟವರಿಗೆ, ವಿದೇಶಕ್ಕೆ ಹೊರಡಲನುವಾದವರಿಗೆ, ಬದುಕಿನಲ್ಲಿ ನೊಂದವರಿಗೆ, ಖಾಯಿಲೆಯಿಂದ ಚೇತರಿಸಿಕೊಳ್ಳುತ್ತಿರುವವರಿಗೆ, ಬೇಸರದಿಂದ ಹೊರಬರಲು ಯತ್ನಿಸುತ್ತಿರುವವರಿಗೆ, ನಿಮ್ಮ ನಲ್ಮೆಯ ಗೆಳೆಯನಿಗೆ-ಗೆಳತಿಗೆ-ಹೀಗೆ ಯಾರಿಗೆ ಬೇಕಾದರೂ, ಯಾವ ವಯಸ್ಸಿನವರಿಗೆ ಬೇಕಾದರೂ, ಯಾವ ಸಂದರ್ಭದಲ್ಲಿ ಬೇಕಾದರೂ `ದಿ ಗಿಫ್ಟ್’ ಕೊಡಬಹುದು. ನಿಮ್ಮ ಸಹಿಯೊಂದಿಗೆ.
  • `ದಿ ಗಿಫ್ಟ್’ ಪುಸ್ತಕ ಮುದ್ರಣಗೊಂಡು ಮುಂದಿನ ವಾರ ನಿಮ್ಮ ಕೈ ಸೇರಲಿದೆ. ಎಲ್ಲಾ ಬುಕ್ ಸ್ಟಾಲ್‌ಗಳಲ್ಲೂ ಪ್ರತಿಗಳು ಲಭ್ಯವಿದೆ.

One thought on “ಯಾರಿಗಾದರೂ ಕೊಡಬಹುದಾದ `ದಿ ಗಿಫ್ಟ್’

Leave a Reply

Your email address will not be published. Required fields are marked *