ಇದು ಯಡ್ಡಿಯನ್ನು ಆತನ ಕೆಲಸ ಕಂಡು ಮೆಚ್ಚುವ ಸಮಯ

in ಅಫಿಡೆವಿಟ್ಟು/ಬಾಟಮ್ ಐಟಮ್

ಇದು ಯಡ್ಡಿಯನ್ನು ಆತನ ಕೆಲಸ ಕಂಡು ಮೆಚ್ಚುವ ಸಮಯ

 ಈ ಕೆಲಸವನ್ನು ಮತ್ತ್ಯಾವ ಮುಖ್ಯಮಂತ್ರಿಯೂ ಮಾಡಲಿಲ್ಲ. ಆರೆಸೆಸ್ಸನ್ನು, ಬಿಜೆಪಿಯನ್ನು ನಾನು ಶತಾಯಗತಾಯ ತಿರಸ್ಕರಿಸುತ್ತೇನೆ. ನನ್ನ ದೃಷ್ಟೀಲಿ ಎಲ್ಲ ರಾಜಕೀಯ ಪಕ್ಷಗಳೂ ಒಂದೇ. ಆದರೆ ಬಿಜೆಪಿಗಿಂತ ಹೆಚ್ಚಾಗಿ ಆರೆಸ್ಸೆಸ್ Anti human.

ಆರಂಭದಲ್ಲಿ ಮೋದಿಯ ಮಾತು ಕೇಳಿ ಯಡಿಯೂರಪ್ಪ ಲಾಕ್‌ಡೌನ್ ಮಾಡುತ್ತಿದ್ದಾರೆ ಅನಿಸುತ್ತಿತ್ತು. ಆದರೆ, ಖಂಡಿತವಾಗಿಯೂ ಈ ಮನುಷ್ಯ ರಸ್ತೆಗಿಳಿದಿದ್ದಾನೆ. ಸರ್ಕಾರ ಮನೆ ಮನೆಗೆ ರೇಷನ್ ಹಂಚುತ್ತಿದೆ. ಅಯ್ಯೋ ಯಡಿಯೂರಪ್ಪನವರಿಗೆ ಕೇಂದ್ರದಿಂದ ಎಷ್ಟರ ಮಟ್ಟಿಗೆ ನೆರವು ಬಂತೋ ಕಾಣೆ. ಆದಾಯ ಎಲ್ಲಿದೆಯೋ ಏನೋ? ಯಡ್ಡಿ ಸರ್ಕಾರದ ಬೊಕ್ಕಸದಿಂದ ಹಣ ಹಿರಿ ಹಿರಿದು ಚೆಲ್ಲುತ್ತಿದ್ದಾರೆ. ಒಬ್ಬ ಮಾನವಂತ ಮುಖ್ಯಮಂತ್ರಿ ಜನರಿಗೆ ಮಾಡುವ ಉಪಕಾರ ಇದಕ್ಕಿಂತ ಹೆಚ್ಚಿರಲಾರದು.

ಯಡಿಯೂರಪ್ಪ ಕೇವಲ ಜಾತಿಯ ಹೆಸರಿನಲ್ಲಿ ಮುಖ್ಯಮಂತ್ರಿಯಾದವರಲ್ಲ. ಅವರಿಗೆ ಅನೇಕ ವರ್ಷಗಳ ರೈತ ಹೋರಾಟದ ಹಿನ್ನೆಲೆ ಇದೆ. ಹೋರಾಟದ ಹಿನ್ನೆಲೆಯಲ್ಲಿ ಬೆಳೆದು ಬಂದ ಮನುಷ್ಯ ಮಾನವ ವಿರೋಧಿಯಾಗಿರಲಾರ. ಉರ ಉರ ಎನ್ನುತ್ತ ವರ್ತಿಸುವ ಯಡ್ಡಿ ಎಲ್ಲೋ ಒಂದು ಕಡೆ ತುಂಬ ಸಾಫ್ಟ್ ಕಾರ್ನರ್ ಆಗೋಗಿದ್ದಾರೆ ಅನ್ಸುತ್ತೆ. ಮನುಷ್ಯನಿಗೆ ಬಲಹೀನತೆಗಳು ಸಹಜ. ಯಡಿಯೂರಪ್ಪರ ಲೈಂಗಿಕ ಬಲಹೀನತೆ ಬಗ್ಗೆ ನನಗೆ ಸಾಕಷ್ಟು ಗೊತ್ತು. ಅದರ ಪರಿಣಾಮವೇ ಶೋಭಾ ಕರಂದ್ಲಾಜೆ.

ಶೋಭಾ ಕರಂದ್ಲಾಜೆ ತನಗೆ ಒದಗಿಸಿದ ಕುರ್ಚಿಗೆ ಅನ್ಯಾಯ ಮಾಡಲಿಲ್ಲ. She was the best minister in Yadiyurappa’s cabinet. ನನಗೆ ಗೊತ್ತು ಇವತ್ತು ಇದು ಚರ್ಚೆಯ ವಿಷಯವಲ್ಲ. ಆರೆಸೆಸ್ಸಿನ ಹಿರಿಯರು ಆಕೆಯನ್ನು ದೂರವಿರಲು ಹೇಳಿದ್ದಾರೆ. ಹೀಗಾಗಿ ಶೋಭಾ ಮುಟ್ಟಾದ ಹೆಂಗಸಿನಂತೆ ಮೂಲೇಲಿ ಕುಳಿತಿದ್ದಾರೆ.

ಅದೇನೇ ಇರಲಿ, ಈ ಹಿಂದೆ ಉತ್ತರ ಕರ್ನಾಟಕ ಭಯಂಕರವಾಗಿ ನೆರೆಹಾವಳಿ ಬಂದು ತತ್ತರಿಸಿದಾಗ ಇದೇ ಯಡ್ಯೂರಪ್ಪ ಇವತ್ತು ಮಾಡಿದ ಕೆಲಸ ಮಾಡದೆ ಹೊಟ್ಟೆಗಿಲ್ಲದವರಂತೆ ಮೋದಿಯ ಮುಂದೆ ನಿಂತು ‘‘ಅಮ್ಮಾ ತಾಯಿ, ಅಮ್ಮಾ ತಾಯಿ” ಎಂದು ಬೇಡಿಕೊಂಡರು. ಇವತ್ತು ಇದೇ ಯಡ್ಡಿ ಒಬ್ಬ ನಿಜವಾದ ಸಮರ್ಥ ನಾಯಕನಂತೆ ವರ್ತಿಸುತ್ತಿದ್ದಾರೆ. ಇಷ್ಟೆಲ್ಲಾ ಬರೆದ ನಾನು ಬಿಜೆಪಿ ಎಂದಾಗಲಿ, ಆರೆಸ್ಸೆಸ್ ಎಂದಾಗಲಿ, ಮೋದಿ ಭಕ್ತನೆಂದಾಗಲಿ ಯಾರೂ ಭಾವಿಸಬೇಕಿಲ್ಲ. ಒಬ್ಬ ಪತ್ರಕರ್ತನಿಗೆ ಒಂದು ವಿಷಯಕ್ಕೆ ಸಂಬಂಧಿಸಿದಂತೆ ತನಗೆ ಅನಿಸಿದ್ದನ್ನು ಮತ್ತು ಸಮಾಜಕ್ಕೆ ಹಿತವಾದುದ್ದನ್ನು ಹೇಳುವ ಹಕ್ಕು ಇರುತ್ತದೆಂಬುದನ್ನು ಹೇಳುತ್ತಾ ನನ್ನ ನಾಲ್ಕು ಮಾತು ಮುಗಿಸುತ್ತೇನೆ.

        -ರವಿ ಬೆಳಗೆರೆ

 

Leave a Reply

Your email address will not be published.

*