ಹಾಯ್ ಬೆಂಗಳೂರ್

ವಿರಾಟ್ ಕೊಹ್ಲಿಗೆ ಅಂದು ಒಂಟಿತನ ಕಾಡಿತ್ತಾದರೂ ಯಾಕೆ?

ಇವತ್ತು ಯಶಸ್ಸಿನ ಉತ್ತುಂಗದಲ್ಲಿರುವ ವಿರಾಟ್ ಕೊಹ್ಲಿಗೆ ಒಂದು ಕಾಲದಲ್ಲಿ ಒಂಟಿತನ ಕಾಡಿತ್ತಾ? ಹೌದು ಅಂತಾರೆ ಸ್ವತಃ ಕೊಹ್ಲಿ. 2014ನೇ ಇಸವಿಯಲ್ಲಿ ಭಾರತವು ಇಂಗ್ಲೆಂಡ್ ಟೂರ್ ಹೋಗಿತ್ತು. ಆ ವೇಳೆ ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಒಂದಲ್ಲ, ಎರಡಲ್ಲ, ಸತತವಾಗಿ ಹತ್ತು ಇನ್ನಿಂಗ್ ಗಳಲ್ಲಿ ವಿಫಲವಾಗುತ್ತಾ ಬಂದರು.

1, 8, 25, 0, 39, 28, 0, 7, 6 ಮತ್ತು 20 – ಇದು 2014 ರಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಗಳಿಸಿದ ರನ್ನುಗಳು. ಪ್ರತಿಯೊಬ್ಬ ಬ್ಯಾಟ್ಸ್ ಮನ್ ಗೂ ಈ ವೈಫಲ್ಯ ಅನ್ನೋದು ಒಂದಲ್ಲ ಒಂದು ಹಂತದಲ್ಲಿ ಕಾಡಿಯೇ ಕಾಡುತ್ತದೆ. ಅದೇ ರೀತಿ ಕೊಹ್ಲಿಗೂ ಕಾಡಿದೆ. ಆದರೆ ಆತ ಅದರಿಂದ ಆದಷ್ಟು ಬೇಗನೆ ಹೊರಬಂದ. ಮುಂದೆಯೇ ಎದುರಾದ ಆಸ್ಟ್ರೇಲಿಯಾ ಸರಣಿಯಲ್ಲಿ ಒಟ್ಟು 692 ರನ್ ಗಳಿಸಿ ಭರ್ಜರಿಯಾಗಿ ತನ್ನ ಫಾರಂಗೆ ಎಂಟ್ರಿ ಕೊಟ್ಟಿದ್ದ.

ಅದೊಂದು ಕಾಡುವ ಹಂತ. ಆಗ ಏನು ಮಾಡಬೇಕು ಅಂತ ತೋಚುವುದಿಲ್ಲ. ಇಂಗ್ಲೆಂಡ್ ವಿರುದ್ಧ ವಿಫಲನಾದಾಗ ನಾನು ಜಗತ್ತಿನಲ್ಲೇ ಯಾರಿಗೂ ಬೇಡವಾದವನು ಎಂಬ ಭಾವನೆ ಕಾಡತೊಡಗಿತು. ಆದರೂ ನಾನು ತಲೆ ಕೆಡಿಸಿಕೊಳ್ಳದೆ ಮುಂದಿನ ಇನ್ನಿಂಗ್ಸ್ ಬಗ್ಗೆ ನನ್ನ ಗಮನ ಕೇಂದ್ರೀಕರಿಸಿದೆ. ಹಾಗಾಗಿ ರನ್ ಗಳನ್ನು ಹೊಡೆಯೋಕೆ ಸಾಧ್ಯಾವಾಯಿತು ಅಂತ ವಿರಾಟ್ ತನ್ನ ಹಳೇ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ.

Leave a Reply

Your email address will not be published. Required fields are marked *