ಹಾಯ್ ಬೆಂಗಳೂರ್

ಏಳು ಬಾರಿ ಸಂಸದರಾಗಿದ್ದ ಮೋಹನ್ ದೇಲ್ಕರ್ ಆತ್ಮಹತ್ಯೆಗೆ ಕಾರಣವೇನು?

ಇತ್ತೀಚೆಗೆ ಈ ಆತ್ಮಹತ್ಯೆ ಅನ್ನೋದು ಕಾಮನ್ ಆಗಿಬಿಟ್ಟಿದೆ. ಹಿರಿಯರಿಲ್ಲ ಕಿರಿಯರಿಲ್ಲ, ಶ್ರೀಮಂತರು ಬಡವರು ಎಂಬ ಭೇದ  ಭಾವ ಮೊದಲೇ ಇಲ್ಲ. ಯಾರೆಂದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಟಿವಿ ಮತ್ತು ಪತ್ರಿಕೆಗಳಲ್ಲಿ ಒಂದಲ್ಲಾ ಒಂದು ಆತ್ಮಹತ್ಯೆಯ ಸುದ್ದಿಯನ್ನು ಓದುತ್ತಲೇ ಇರುತ್ತೇವೆ ಅಂತ ಜನರು ಆಡಿಕೊಳ್ಳುವಂತಾಗಿದೆ. ಅದೇನೇನು ತೊಂದರೆ ಟೆನ್ಷನ್ ಇರುತ್ತೋ ಏನು ಕತೆಯೋ ಯಾರಿಗೆ ಗೊತ್ತು.

ಅಂದಹಾಗೆ ಈ ಮಾತನ್ನು ಹೇಳಲಿಕ್ಕೆ ಕಾರಣ ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ್ ಹವೇಲಿಯ ಸಂಸದ ಮೋಹನ್ ದೇಲ್ಕರ್. ಅವರಿಗೆ ಅದೇನು ಸಮಸ್ಯೆ ಇತ್ತೋ ಏನೋ ಇಂದು ದಕ್ಷಿಣ ಮುಂಬೈನ ಸೀ ಗ್ರೀನ್ ಸೌತ್ ಎಂಬ ಹೊಟೇಲ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವತ್ತು ಮಧ್ಯಾಹ್ನ 2 ಗಂಟೆಗೆ ದೇಹ ಪತ್ತೆಯಾಗಿದ್ದು ಕೂಡಲೇ ಅದನ್ನು ಪೋಸ್ಟ್ ಮಾರ್ಟಂಗೆ ಕಳಿಸಲಾಗಿದೆ. ಯಾವುದೇ ಡೆತ್ ನೋಟ್ ಗಳು ಕಂಡುಬಂದಂತಿಲ್ಲ.

58 ವರ್ಷ ವಯಸ್ಸಿನವರಾಗಿದ್ದ ಮೋಹನ್ ದೇಲ್ಕರ್ ಅವರು ಏಳು ಬಾರಿ ಸಂಸದರಾಗಿ ಅದೇ ದಾದ್ರ ಮತ್ತು ನಗರ್ ಹವೇಲಿಯಿಂದ ಆಯ್ಕೆಯಾಗಿದ್ದರು. ಅನೇಕ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರಾಗಿದ್ದರು. ಅವರ ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಇನ್ನೂ ಪೊಲೀಸ್ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *