ಹಾಯ್ ಬೆಂಗಳೂರ್

ಕಾಂಗ್ರೆಸ್ ಎಂಬ ಆನೆ ಗಾತ್ರದ ಪಕ್ಷ ಸೋತು ಸುಣ್ಣವಾಗಿದ್ಹೇಕೆ?

2014ರ ತನಕ ಕಾಂಗ್ರೆಸ್ ಪಕ್ಷವು ಇದ್ದ ರೀತಿಯೇ ಬೇರೆ. ಅದಾದ ನಂತರ ಇರುವ ರೀತಿಯೇ ಬೇರೆ. ಹಂತ ಹಂತವಾಗಿ ಅದು ಇಡೀ ದೇಶದಲ್ಲಿ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದೆ. ಇದ್ದರೆ ಬಹುಶಃ ಕರ್ನಾಟಕದಲ್ಲಿ ಮಾತ್ರ ಕೊಂಚ ಸ್ಟ್ರಾಂಗ್ ಇರಬೇಕು ಅಂತ ಅನಿಸುತ್ತದೆ. ಆದರೂ ಮೋದಿ ಮಾಸ್ಟರ್ ಕಳೆದ ವರ್ಷ ಅದನ್ನೂ ಆಪರೇಷನ್ ಮಾಡಿ ತಮ್ಮವರನ್ನು ತಂದು ಕೂರಿಸಿಬಿಟ್ಟರಲ್ಲ. ಇನ್ನೇನು ಬೇಕು ಬಿಜೆಪಿಯವರಿಗೆ. ಸರಿ ಸುಮಾರು ಹದಿನೈದಕ್ಕೂ ಹೆಚ್ಚು ರಾಜ್ಯಗಳಲ್ಲಿ ಇವತ್ತು ಹಿಡಿತ ಹೊಂದಿರುವ ಬಿಜೆಪಿಯು ದೇಶದಲ್ಲಿ ಕಾಂಗ್ರೆಸ್ ಎಂಬ ಪಕ್ಷವನ್ನು ನಿಧಾನವಾಗಿ ಮೂಲೆಗುಂಪು ಮಾಡುತ್ತಿದೆ ಎನ್ನುವುದು ಯಾರ ಗಮನಕ್ಕೂ ಬರುತ್ತಿಲ್ಲ.

ಅನೇಕರಿಗೆ ಗೊತ್ತಿರಲಿಕ್ಕಿಲ್ಲ. ಕಾಂಗ್ರೆಸ್ ಎಂಬ ಅತ್ಯಂತ ಪುರಾತನ ಪಕ್ಷವು ಇವತ್ತು ತನ್ನ ಬಳಿ ಹಣ ಇಲ್ಲ ಅಂತ ಬರಿಗೈ ದಾಸಯ್ಯನ ರೀತಿ ತನ್ನನ್ನು ತಾನು ಬಿಂಬಿಸಿಕೊಳ್ಳುತ್ತಿದೆ. ಇದ್ದರೂ ಇರಬಹುದು. ಎಲ್ಲ ಬಿಜೆಪಿಯೇ ಬಡಿದು ಬಾಯಲ್ಲಿ ಹಾಕಿಕೊಂಡರೆ ಇವರಿಗೆ ಫಂಡ್ಸ್ ಬರೋದಾದರೂ ಎಲ್ಲಿಂದ. ಬಹುಶಃ ಪ್ರಿಯಾಂಗಾ ಗಾಂಧಿ ಎದ್ದು ಬರುವ ತನಕ ಆ ಪಕ್ಷಕ್ಕೆ ಬಲ ಬರೋದಿಲ್ಲ ಅಂತ ಕಾಣಿಸುತ್ತೆ.

ಕಳೆದ ತಿಂಗಳು ಎಐಸಿಸಿ ಪ್ರಮುಖರು ಮಹಾರಾಷ್ಟ್ರ, ಜಾರ್ಖಂಡ್ ಹಾಗೂ ಪಂಜಾಬ್ ನ ಕಾಂಗ್ರೆಸ್ ಮುಖಂಡರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸಾಮಾನ್ಯವಾಗಿ ಎಐಸಿಸಿ ಮೀಟಿಂಗ್ ಗಳು ನಡೆಯೋ ಕಾರಣವೇ ಬೇರೆ. ಪಕ್ಷಕ್ಕೆ ಸಂಬಂಧಪಟ್ಟಂತೆ ರಾಜ್ಯದ ಅಧ್ಯಕ್ಷರನ್ನು ನೇಮಕ ಮಾಡುವ ವಿಚಾರ, ಪದಾಧಿಕಾರಿಗಳ ಆಯ್ಕೆ, ರಾಜ್ಯ ಉಸ್ತುವಾರಿಗಳ ನೇಮಕ – ಹೀಗೆ ಏನಾದರೊಂದು ಇರುತ್ತದೆ. ಆದರೆ ಇದೇ ಮೊದಲ ಬಾರಿಗೆ ಹಣಕಾಸು ಮುಗ್ಗಟ್ಟು ಎದುರಾಗಿದೆ ಅಂತ ಸಭೆ ಸೇರಿದರಂತೆ. ಎಲ್ಲಿಗೆ ಬಂದು ನಿಂತುಕೊಂಡಿತು ನೋಡಿ ಪಕ್ಷದ ಸ್ಥಿತಿ.

Leave a Reply

Your email address will not be published. Required fields are marked *