ನಟಿ ರಾಗಿಣಿಗೆ ಜಾಮೀನು ಸಿಕ್ಕಿದ್ದು ಯಾಕೆ ಗೊತ್ತಾ?
ಕಡೆಗೂ ನಟಿ ರಾಗಿಣಿ ನಿರಾಳರಾಗಿದ್ದಾರೆ. ಕಳೆದ ವರ್ಷ ಸೆಪ್ಟಂಬರ್ 5ನೇ ತಾರೀಖಿನಂದು ಡ್ರಗ್ಸ್ ಕೇಸಿನಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದ ತುಪ್ಪದ ಬೆಡಗಿ ಸುಮಾರು ನಾಲ್ಕೂವರೆ ತಿಂಗಳುಗಳ ಕಾಲ ಬಂದೀಖಾನೆಯಲ್ಲಿ ಇದ್ದರು. ಹೈಕೋರ್ಟ್ ಕೂಡ ಜಾಮೀನು ನಿರಾಕರಿಸಿತ್ತು. ಹಾಗಾಗಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಯಿತು. ಅಲ್ಲಿ ಅವರಿಗೆ ಜಯ ಸಿಕ್ಕಿದೆ. ಸರ್ವೋಚ್ಛ ನ್ಯಾಯಾಲಯ ರಾಗಿಣಿಗೆ ಜಾಮೀನು ಮಂಜೂರು ಮಾಡಿದೆ.
ಯಾವೆಲ್ಲಾ ಅಂಶಗಳ ರಾಗಿಣಿಗೆ ಜಾಮೀನು ಸಿಕ್ಕಿತು ಅಂತ ನೋಡುವುದಾದರೆ;
- ಇದು ಬೇಲ್ ನೀಡಬಹುದಾದ ಪ್ರಕರಣ
- ರವಿಶಂಕರ್ ನೀಡಿದ ಹೇಳಿಕೆಯಿಂದಾಗಿ ರಾಗಿಣಿಯನ್ನು ಬಂಧಿಸಲಾಗಿದೆ
- ರಾಗಿಣಿ ವಿರುದ್ಧ ಸೂಕ್ತ ಚಾರ್ಜ್ ಶೀಟ್ ಹಾಕಿಲ್ಲ
- ರಾಗಿಣಿ ಡ್ರಗ್ಸ್ ಸೇವಿಸಿರಬಹುದು. ಆದರೆ, ಆಕೆ ಡ್ರಗ್ ಪೆಡ್ಲರ್ ಅಲ್ಲ
- ಆಕೆಯನ್ನು ಉದ್ದೇಶಪೂರ್ವಕವಾಗಿ ಬಂಧಿಸಿರುವಂತೆ ಕಾಣುತ್ತದೆ
- ಆಕೆ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿರಬಹುದು. ಆದರೆ, ಆಕೆಯ ಮನೆಯಲ್ಲಿ ಡ್ರಗ್ಸ್ ಸಿಕ್ಕಿಲ್ಲ
ಇವಿಷ್ಟೂ ಅಂಶಗಳ ಆಧಾರದ ಮೇಲೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್.ಎಫ್.ನಾರೀಮನ್ ರಾಗಿಣಿಗೆ ಜಾಮೀನು ಮಂಜೂರು ಮಾಡಿದ್ದಾರೆ.