ಹಾಯ್ ಬೆಂಗಳೂರ್

ವಾಟ್ಸಪ್ ಸಂದೇಶ ಭಾರತದಲ್ಲಿ ಮೊದಲು ಯಾರಿಗೆ ಬಂತು ಅಂತ ತಿಳಿಸಬೇಕು

ಇಂದು ಕೇಂದ್ರ ಸರ್ಕಾರ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ಸಂಬಂಧಪಟ್ಟಂತೆ ಹೊಸದೊಂದು ನಿಯಮವನ್ನು ಘೋಷಿಸಿದ್ದು ಸದ್ಯದಲ್ಲೇ ಅದನ್ನು ಜಾರಿಗೊಳಿಸಲಾಗುತ್ತದೆ. ಅದರ ಪ್ರಕಾರ ವಾಟ್ಸಾಪ್ ನ ಮೆಸೇಜು ಬೇರೆ ದೇಶದಲ್ಲಿ ರಚಿತವಾಗಿದ್ದರೆ ಭಾರತದಲ್ಲಿ ಅದು ಯಾರಿಗೆ ಮೊದಲು ಬಂತು ಅಂತ ವಾಟ್ಸಾಪ್ ಸಂಸ್ಥೆ ಹೇಳಬೇಕು. ಅಂದರೆ ಬೇರೆ ದೇಶದಲ್ಲಿ ಟ್ವೀಟ್ ಅಥವಾ ವಾಟ್ಸಪ್ಪನ್ನು ರಚಿಸಿದ್ದರೆ ನಮ್ಮ ದೇಶದಲ್ಲಿ ಅದನ್ನು ಯಾರ ನಂಬರ್ ಗೆ ಮೊದಲು ಕಳಿಸಲಾಯಿತು ಎಂಬುದನ್ನು ಹೇಳಬೇಕು.

ಕೇವಲ ವಾಟ್ಸಾಪ್ ಒಂದೇ ಅಲ್ಲ, ಇನ್ಸ್ ಟಾಗ್ರಾಂ, ಟ್ವಿಟ್ಟರ್, ಫೇಸ್ ಬುಕ್, ಯೂಟ್ಯೂಬ್ ಸೇರಿದಂತೆ ಎಲ್ಲವೂ ಸರ್ಕಾರದ ಹೊಸ ನೀತಿಗೆ ಒಳಪಡುತ್ತದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸುಳ್ಳು ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗುತ್ತಿತ್ತು. ಆ ಕಾರಣಕ್ಕಾಗಿ ಸರ್ಕಾರ ಇಂಥದ್ದೊಂದು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ.

ಮೊದ ಮೊದಲು ಸರ್ಕಾರ ಅಂಥ ಅಪಪ್ರಚಾರ ಮಾಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು  ಅಂತ ಹೇಳಿತು. ಆದರೂ ಅಂತಹ ಅಪಪ್ರಚಾರಗಳು ನಿಲ್ಲದ ಕಾರಣ ಇಂಥದ್ದೊಂದು ಕಟ್ಟುನಿಟ್ಟಿನ ನಿಯಮವನ್ನು ಜಾರಿಗೆ ತರಲೇಬೇಕಾಯಿತು ಅಂತ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *