ಹಾಯ್ ಬೆಂಗಳೂರ್

ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸಿದ ಮಹಿಳೆ ಫೈನ್ ಕೇಳಿದರೆ ಏನು ಮಾಡಿದಳು ಗೊತ್ತೇ?

ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುತ್ತಿದ್ದರೆ ಟ್ರಾಫಿಕ್ ಪೊಲೀಸರಿಗಂತೂ ಹಬ್ಬವೋ ಹಬ್ಬ. ಹುಡುಗರು ಎಸ್ಕೇಪ್ ರೂಟನ್ನೇ ಹುಡುಕುತ್ತಿರುತ್ತಾರೆ. ಕೆಲವರು ಅಷ್ಟೋ ಇಷ್ಟೋ ಕೊಟ್ಟು ಕೈ ಮುಗಿದು ಕಾಲ್ಕೀಳುತ್ತಾರೆ. ಆದರೆ ಬೆಳಗಾವಿಯಲ್ಲಿ ಒಬ್ಬಳು ಹೆಣ್ಣು ಮಗಳು ಫೈನ್ ಕೊಡಲು ಕೈಯಲ್ಲಿ ಕಾಸಿಲ್ಲದೆ ತನ್ನ ತಾಳಿಯನ್ನೇ ಬಿಚ್ಚಿ ಕೊಟ್ಟಿದ್ದಾಳೆ. ಆಕೆ ತಾಳಿಯನ್ನು ಬಿಚ್ಚುತ್ತಿರುವ ದೃಶ್ಯ ಮತ್ತೇ ಅದನ್ನು ಪೊಲೀಸರ ಕೈಗೆ ಕೊಟ್ಟು ನನ್ನ ಹತ್ರ ಸದ್ಯಕ್ಕೆ ಇಷ್ಟೇ ಇರೋದು ಅಂತ ಗೋಗರೆಯುತ್ತಿರುವ ದೃಶ್ಯ ವೈರಲ್ ಆಗಿದೆ.

ಅಂದಹಾಗೆ ತಾಳಿ ತೆಗೆದುಕೊಟ್ಟ ಆ ಮಹಿಳೆಯ ಹೆಸರು ಭಾರತಿ ವಿಭೂತಿ. ವಯಸ್ಸು ಸುಮಾರು ಮೂವತ್ತರ ಆಸುಪಾಸು. ಆಕೆ ತನ್ನ ಪತಿ ಜೊತೆ ಸೇರಿಕೊಂಡು ಹುಲ್ಲೋಹಟ್ಟಿ ಎಂಬ ಗ್ರಾಮದಲ್ಲಿ ಹೊಟೇಲ್ ಒಂದರಲ್ಲಿ ಚಿಕ್ಕದೊಂದು ಹೊಟೇಲ್ ನಡೆಸುತ್ತಿದ್ದಾರೆ. ನನ್ನೆ ರಾತ್ರಿ ಅವರು ಮಾರುಕಟ್ಟೆಗೆ ಅಂತ ಹೋಗಿದ್ದವರು ವಾಪಸ್ ಬರುತ್ತಿದ್ದಾಗ ಟ್ರಾಫಿಕ್ ಪೊಲೀಸ್ ನವರು ಹಿಡಿದಿದ್ದಾರೆ. ಆಗ ಆ ಹೆಂಗಸು ತನ್ನ ಬಳಿ ಇರೋದೇ ನೂರು ರೂಪಾಯಿ ಅಂತ ಗೋಗರೆದಿದ್ದಾಳೆ. ಆದರೂ ಪೊಲೀಸರು ಕೇಳಿಲ್ಲ. ಇಲ್ಲ ಫೈನ್ ಕೊಡಲೇಬೇಕು ಅಂತ ಪಟ್ಟು ಹಿಡಿದುಕುಳಿತಿದ್ದಾರೆ.

ಇದೇ ರೀತಿ ಸುಮಾರು ಎರಡು ತಾಸು ಮಾತುಕತೆ ನಡೆದಿದೆ. ಪೊಲೀಸರು ಒಪ್ಪಿಕೊಳ್ಳುವುದಕ್ಕೆ ತಯಾರಿರಲಿಲ್ಲ. ಕಡೆಗೆ ಬೇರೆ ದಾರಿ ಕಾಣದ ಆಕೆ ತನ್ನ ತಾಳಿಯನ್ನೇ ತೆಗೆದುಕೊಡಲು ಮುಂದಾಗುತ್ತಾಳೆ. ಇದನ್ನು ನೋಡಿದ ಹಿರಿಯ ಪೊಲೀಸರ್ ಅಧಿಕಾರಿಯೊಬ್ಬರು ಮಧ್ಯಪ್ರವೇಶ ಮಾಡಿ ಆ ಸ್ಥಳದಿಂದ ಕಳಿಸಿಕೊಟ್ಟಿದ್ದಾರೆ.

Leave a Reply

Your email address will not be published. Required fields are marked *