ಹಾಯ್ ಬೆಂಗಳೂರ್

ಗೂಗಲ್ ಬಳಸುವಾಗ ನಾವು ಇವಿಷ್ಟನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು

ಸಾಮಾನ್ಯವಾಗಿ ನಾವು ಯಾವುದಾದರು ಮಾಹಿತಿ ಬೇಕು ಅಂದರೆ ಸಾಕು ಮೊದಲು ಗೂಗಲ್ ಮೊರೆ ಹೋಗ್ತೀವಿ. ಅಷ್ಚರ ಮಟ್ಟಿಗೆ ಎಲ್ಲದಕ್ಕೂ ಅದರ ಮೇಲೆಯೇ ಡಿಪೆಂಡ್ ಆಗಿಬಿಟ್ಟಿದ್ದೀವಿ. ಒಂದು ಪಿನ್ ನಿಂದ ಹಿಡಿದು ರಾಕೆಟ್ ತನಕ, ಅಷ್ಟೇ ಯಾಕೆ ಭೂಮಿಯಿಂದ ಆಚೆಯ ವಿಚಾರಗಳ ಬಗ್ಗೆ ಕೂಡ ಇದರ ಮೂಲಕ ತಿಳಿದುಕೊಳ್ಳಬಹುದು. ಅಷ್ಟರ ಮಟ್ಟಿಗೆ ನಾವೀಗ ಗೂಗಲ್ ಗೆ ದಾಸರಾಗಿಬಿಟ್ಟಿದ್ದೀವಿ. ಅದಿಲ್ಲದೆ ಕೈಕಾಲೇ ಓಡೋದಿಲ್ಲ ಎಂಬಂತಾಗಿಬಿಟ್ಟಿದೆ. ಆದರೂ ಇವೊಂದಿಷ್ಟು ವಿಷಯಗಳ ಬಗ್ಗೆ ಗೂಗಲ್ ಸಂಸ್ಥೆ ಸಲಹೆ ನೀಡಿದೆ.

ಕಾಂಟ್ಯಾಕ್ಟ್ ನಂಬರ್ ಗಳನ್ನು ತೆಗೆಯುವಾಗ ಬಹಳ ಎಚ್ಚರದಿಂದ ಇರಬೇಕಂತೆ. ಅದೆಲ್ಲೋ ಅಜ್ಞಾತ ಸ್ಥಳದಲ್ಲಿ ಕುಳಿತ ಹ್ಯಾಕರ್ ಗಳು ಎಂಥದೋ ಆಫರ್ ಇದೆ, ಜಸ್ಟ್ ಕ್ಲಿಕ್ ಮಾಡಿ ಅಂತ ಪ್ರಚೋದನೆ ಮಾಡುತ್ತಾರೆ. ನಮಗೂ ಅದನ್ನು ನೋಡಿದ ಕೂಡಲೇ ಕ್ಲಿಕ್ ಮಾಡೇಬಿಡಬೇಕು ಅಂತ ಅನ್ನಿಸುತ್ತದೆ. ತಾಳು ನೋಡೋಣ ಅದೇನಿದೆ ಅಂತ ಕ್ಲಿಕ್ ಮಾಡೇಬಿಡ್ತೀವಿ. ಅಲ್ಲಿಗೆ ಫಿನಿಷ್. ಒಂದೊಂದಾಗಿ ಅದು ತೋರಿಸುವ ಲಿಂಕನ್ನು ಒತ್ತುತ್ತಾ ಒತ್ತುತ್ತಾ ಹೋಗುತ್ತೀವಿ. ನಮಗೇ ಗೊತ್ತಿಲ್ಲದೆ ಅದರ ಜಾಲದೊಳಕ್ಕೆ ಸಿಲುಕಿಕೊಂಡುಬಿಟ್ಟಿರುತ್ತೇವೆ.

ಅದೇ ರೀತಿ ಬ್ಯಾಂಕಿಂಗ್ ವೆಬ್ ಸೈಟ್ ಗಳನ್ನು ಕ್ಲಿಕ್ ಮಾಡುವಾಗಲೂ ಅಷ್ಟೇ ಬಹಳ ಹುಷಾರಾಗಿರಬೇಕು. ಅದರ ಯು.ಆರ್.ಎಲ್.ಕೋಡನ್ನು ಸರಿಯಾಗಿ ಎರಡೆರಡು ಬಾರಿ ಪರೀಕ್ಷೆ ಮಾಡಿಕೊಳ್ಳಿ. ಬ್ಯಾಂಕ್ ನವರದ್ದೇ ಅಧಿಕೃತವಾದಂಥ ವೆಬ್ ಸೈಟ್ ಇರುತ್ತದೆ. ಅದರ ಮೂಲಕವೇ ಲಾಗಿನ್ ಆಗೋದು ಸುರಕ್ಷಿತ. ಇಲ್ಲದಿದ್ದರೆ ತೊಂದರೆ ಅನುಭವಿಸಬೇಕಾದೀತು.

ಮೆಡಿಕಲ್ ಗೆ ಸಂಬಂಧಿಸಿದಂತಹ ಟಿಪ್ಸ್ ಗಳ ಲಿಂಕ್ ಪಾಪ್ ಅಗುತ್ತಿರುತ್ತದೆ. ಅದರಲ್ಲೂ ನ್ಯೂಟ್ರಿಷನ್, ತೂಕ ಕಡಿಮೆ ಮಾಡಿಕೊಳ್ಳುವಂತಹ ಟಿಪ್ಸ್ ಪಾಪಪ್ ಆದರೆ ಸುಮ್ಮನೆ ನಿರ್ಲಕ್ಷ್ಯ ಮಾಡಿ. ಮತ್ತು ನಿಮ್ಮ ಆರೋಗ್ಯಕ್ಕೆ ಏನು ಆಹಾರ ಬೇಕೋ ಅದನ್ನು ನಿಮ್ಮ ವೈದ್ಯರನ್ನು ಸಂಪರ್ಕ ಮಾಡಿ ಪಡೆದುಕೊಳ್ಳಿ. ಅದು ಬಿಟ್ಟು ಈ ಗೂಗಲ್ ನಲ್ಲ ಸಿಗುವಂಥ ಮಾಹಿತಿಗಳ ಮೇಲೆ ಅವಲಂಬಿತರಾಗಬೇಡಿ ಅಂತಾರೆ ವೈದ್ಯರು.

ಇನ್ನು ಪರ್ಸನಲ್ ಫೈನಾನ್ಸ್, ಸ್ಟಾಕ್ ಮಾರ್ಕೆಟ್ ಟಿಪ್ಸ್ ಗಳಿಗೂ ಕೂಡ ಇದರ ಮೇಲೆ ಅವಲಂಬಿತರಾಗಬೇಡಿ. ಅದರಿಂದ ಸರಿಯಾದ ಮಾಹಿತಿ ಸಿಗೋದಿಲ್ಲ ಅಂತಾರೆ ತಜ್ಞರು. ಇದರ ಜೊತೆಗೆ ಕೂಪನ್ ಗಳು, ಆಫರ್ ಗಳು ಇ-ಕಾಮರ್ಸ್ ವೆಬ್ ಸೈಟುಗಳಲ್ಲಿ ದೊರೆಯುತ್ತವೆ. ಅದಕ್ಕೆ ಮರುಳಾಗಬೇಡಿ ಅಂತಾರೆ ತಜ್ಞರು.

Leave a Reply

Your email address will not be published. Required fields are marked *