ಹಾಯ್ ಬೆಂಗಳೂರ್

ಗಡಿ ವಿಚಾರದಲ್ಲಿ ನಮ್ಮ ಕೇಂದ್ರ ಸರ್ಕಾರ ಹೇಳಿದ್ದನ್ನು ಕೇಳಿಕೊಂಡು ಸುಮ್ಮನಿರಬೇಕು ಅಷ್ಟೇ

ಭಾರತ-ಚೀನಾ ಗಡಿ ವಿವಾದ ಸದ್ಯಕ್ಕೆ ಇತ್ಯರ್ಥ ಆಗೋ ಮಟ್ಟಿಗೆ ಕಾಣುತ್ತಿಲ್ಲವಾದರೂ ಮಾತುಕತೆಯಂತೂ ಜಾರಿಯಲ್ಲಿ ಇದ್ದೇ ಇದೆ. ಒಂದೇ ಒಂದು ಸಮಾಧಾನಕರ ಅಂಶ ಏನು ಅಂದರೆ ಲಡಾಕ್ ನ ಪ್ಯಾಂಗಾಂಗ್ ಸೋ ಪ್ರದೇಶದಿಂದ ಚೀನಾದ ಸೈನಿಕರು ಹಿಂದಕ್ಕೆ ಸರಿದಿದ್ದಾರೆ ಎಂಬುದು (ಭಾರತ ಸರ್ಕಾರ ಹೇಳುತ್ತಿರುವಂತೆ).

ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಒಂದಲ್ಲಾ ಒಂದು ಕಾರಣಕ್ಕೆ ಎರಡೂ ದೇಶಗಳ ನಡುವೆ ಕಿರಿ ಕಿರಿ ನಡೆಯುತ್ತಲೇ ಇದೆ. ಹತ್ತು ಸುತ್ತು ಮಿಲಿಟರಿ ಮಟ್ಟದ ಮಾತುಕತೆಯೂ ನಡೆಯಿತು. ಆದರೂ ಒಂದು ಅಂತಿಮ ಒಪ್ಪಂದಕ್ಕೆ ಬರಲು ಎರಡೂ ದೇಶಗಳಿಗೆ ಸಾಧ್ಯವಾಗಿರಲಿಲ್ಲ.

ಏನೇ ಆಗಲಿ, ಪರಿಸ್ಥಿತಿ ಎಂಥದ್ದೇ ಇರಲಿ, ಭಾರತದ ಕಡೆ ಸಾಕಷ್ಟು ಪ್ರಮಾಣದಲ್ಲಿ ಸೈನಿಕರ ಪಡೆ ಶಸ್ತ್ರಸಜ್ಜಿತವಾಗಿ ತಯಾರಾಗೇ ಇದೆ. ಮೇಲಿಂದ ಆರ್ಡರ್ ಬರಲಿ ಅಂತ ಬಂದೂಕು ಹಿಡಿದುಕೊಂಡು ಯೋಧರು ಕಾಯುತ್ತಾ ಕುಳಿತಿದ್ದಾರೆ. ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿ.ಎಲ್.ಎ) ಯನ್ನು ಹದ್ದಿನ ಕಣ್ಣಿಟ್ಟು ಗಮನಿಸುತ್ತಲೇ ಇದ್ದಾರೆ.

ಗಡಿ ಭಾಗದಲ್ಲಿ ಚೀನಾ ಒಂದು ಕಾಲೋನಿಯನ್ನೇ ನಿರ್ಮಿಸಿದೆ ಅಂತ ಸುದ್ದಿಯೊಂದು ಕೆಲ ಮಾಧ್ಯಮಗಳಲ್ಲಿ ಇತ್ತೀಚೆಗಷ್ಟೇ ಹರಿದಾಡುತ್ತಿತ್ತು. ಈಗ ನೋಡಿದರೆ ಆ ವಿಷಯದ ಬಗ್ಗೆ ಯಾವುದೇ ಚರ್ಚೆಯಾಗಲಿ, ಮಾತುಕತೆಯಾಗಲಿ ಇಲ್ಲವೇ ಇಲ್ಲ. ಮಾತೆತ್ತಿದರೆ ಸಾಕು ಗಡಿಯಲ್ಲಿ ಎರಡೂ ಕಡೆ ಸೈನಿಕರ ನಡುವೆ ಮಾತುಕತೆ ನಡೀತಿದೆ ಅನ್ನುತ್ತಿದೆ ನಮ್ಮ ಸರ್ಕಾರ. ಅದು ಹೇಳಿದಕ್ಕೆ ಹೂಂಗುಟ್ಟುತ್ತಾ ಸುಮ್ಮನಿರಬೇಕಾಗಿದೆ ಅಷ್ಟೇ.

Leave a Reply

Your email address will not be published. Required fields are marked *