ಹಾಯ್ ಬೆಂಗಳೂರ್

ದುಬೈನ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ

  • ಕಿಚ್ಚ ಸುದೀಪ್ ಹೊಸ ಅವತಾರದಲ್ಲಿ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದ ಫ್ಯಾಂಟಂ ಚಿತ್ರದ ಹೆಸರು ‘ವಿಕ್ರಾಂತ್ ರೋಣ’ ಅಂತ ಬದಲಾಗಿದೆ.  ಚಿತ್ರದ ಅಧಿಕೃತ ಪೋಸ್ಟರ್ ಅನ್ನು ನಿರ್ದೇಶಕ ನಿರೂಪ್ ಭಂಡಾರಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ.
  • ಸುದೀಪ್ ಅಭಿಮಾನಿಗಳಿಗೆ ಇನ್ನೂ ಖುಷಿ ಕೊಡುವ ಸಂಗತಿ ಅಂದರೆ ಚಿತ್ರದ ಟೈಟಲ್ ಲೋಗೋ ಮತ್ತು ನೂರಾ ಎಂಬತ್ತು ಸೆಕೆಂಡುಗಳ ಸಣ್ಣ ಬಿಟ್ ದುಬೈನ ವಿಶ್ವವಿಖ್ಯಾತ ಬುರ್ಜ್ ಖಲೀಫಾ ಮೇಲೆ ಇದೇ ಜನವರಿ 31ರಂದು ಪ್ರದರ್ಶನಗೊಳ್ಳಲಿದೆ.
  • ಕನ್ನಡ ಚಿತ್ರರಂಗದ ಮಟ್ಟಿಗಷ್ಟೇ ಅಲ್ಲ ಇಡೀ ವಿಶ್ವದ ಚಿತ್ರರಂಗದ ಮಟ್ಟಿಗೆ ಇದೊಂದು ದಾಖಲೆಯೇ ಸರಿ. ಇಲ್ಲೀ ತನಕ ಯಾವುದೇ ಚಿತ್ರದ ಟೈಟಲ್ ಲೋಗೋ ಮತ್ತು ಟೀಸರ್ ಬುರ್ಜ್ ಖಲೀಫಾ ಮೇಲೆ ತೆರೆಕಂಡ ಉದಾಹರಣೆಯೇ ಇಲ್ಲ.
  • ಕಿಚ್ಚ ಸುದೀಪ್ ಮತ್ತು ನಿರೂಪ್ ಭಂಡಾರಿಯವರ ಈ ಸಾಹಸ ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಷಯವಾಗಿದ್ದು ಕಿಚ್ಚನ ಅಭಿಮಾನಿಗಳಿಗಂತೂ ಡಬಲ್ ಖುಷಿಯಾಗಿದೆ.

Leave a Reply

Your email address will not be published. Required fields are marked *