ಹಾಯ್ ಬೆಂಗಳೂರ್

ಆಟೋದಲ್ಲಿ ಹನ್ನೆರಡು ದೇಶ ಸುತ್ತಿದ್ದರು

  • ಕೆಲವರ ಹುಚ್ಚು ಸಾಹಸಗಳೇ ಹೀಗಿರುತ್ತವೆ!

ಒಮ್ಮೆ ಥಾಲಂಡ್‌ಗೆ ಭೇಟಿ ನೀಡಿದ ಬ್ರಿಟಿಷ್ ಯುವತಿ ಹಕ್ಸ್‌ಟರ್ ಆಕಸ್ಮಿಕವಾಗಿ ಅಲ್ಲಿ ಪ್ರಯಾಣಿಕರು ಸಂಚರಿಸುವ, ನಮ್ಮಲ್ಲಿನ ಆಟೋವನ್ನು ಹೋಲುವ ಮೂರು ಚಕ್ರದ ವಾಹನ `ಟುಕ್-ಟುಕ್’ನಲ್ಲಿ ಡ್ರೈವರ್ ಸೀಟ್‌ನಲ್ಲಿ ಕುಳಿತು ಸಂಚರಿಸಿದಳು. ಅವಳಿಗೆ ಈ ಸಂಚಾರ ಅದೆಷ್ಟು ಮುದ ನೀಡಿತೆಂದರೆ ಇಂಥ ಒಂದು ವಾಹನವನ್ನು ಥಾಲಂಡ್‌ನಿಂದ ಇಂಗ್ಲಂಡ್‌ವರೆಗೆ ಓಡಿಸಿಕೊಂಡು ಹೋಗಬೇಕೆನ್ನುವ ತೀರ್ಮಾನಕ್ಕೆ ಬಂದಳು. ಜೊತೆಗೆ ತನ್ನ ಪ್ರಯಾಣದಲ್ಲಿ ಸಮಾಜದ ಕಡು ಬಡವರಿಗೆ ಸಹಾಯ ಮಾಡಲು ಹಣ ಸಂಗ್ರಹಿಸುವ ಯೋಜನೆಯೊಂದನ್ನು ಸಿದ್ಧಪಡಿಸಿಕೊಂಡಳು. ೨೦೦೬ರಲ್ಲಿ ಗುಲಾಬಿ ಬಣ್ಣದ ಟುಕ್-ಟುಕ್‌ನಲ್ಲಿ ತನ್ನ ಗೆಳತಿ ಕೆಂಟ್ ಎನ್ನುವವಳ ಜೊತೆ ಥಾಲಂಡ್‌ನಿಂದ ತನ್ನ ಪಯಣ ಆರಂಭಿಸಿದ ಹಕ್ಸ್‌ಟರ್ ದಿನಕ್ಕೆ ಸರಾಸರಿ ಇನ್ನೂರೈವತ್ತು ಕಿಲೋಮೀಟರ್‌ನಂತೆ ಹತ್ತೊಂಬತ್ತು ಸಾವಿರ ಕಿಲೋಮೀಟರ್ ಕ್ರಮಿಸಿ ಚೈನಾ, ಕಜಕಿಸ್ತಾನ್, ರಷ್ಯಾ, ಉಕ್ರೇನ್, ಪೋಲಂಡ್, ಜರ್ಮನಿ, ಬೆಲ್ಜಿಯಂ ಹೀಗೆ ಒಟ್ಟು ಹನ್ನೆರಡು ದೇಶಗಳಲ್ಲಿ ಸಂಚರಿಸಿ ಮೂರು ತಿಂಗಳ ಪ್ರಯಾಣದ ನಂತರ ಇಂಗ್ಲಂಡ್ ತಲುಪಿದಳಲ್ಲದೆ ಹೆಣ್ಣು ಎಂದರೆ ಅಬಲೆಯಲ್ಲ್ಲ ಸಾಹಸಿಯೂ ಹೌದು ಎಂಬ ಸಂದೇಶವನ್ನು ಪ್ರಪಂಚಕ್ಕೆ ಸಾರಿದಳು.

Leave a Reply

Your email address will not be published. Required fields are marked *