ನಟಿಮಣಿಯರಿಗೆ ಇನ್ನೂ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ

in ಲೀಡ್ ನ್ಯೂಸ್/ಸಿನೆಮಾ ಪುಟ
  • ನಟಿ ರಾಗಿಣಿ ಮತ್ತು ಸಂಜನಾರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಲಾಗಿದೆ. ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಇಂದು ಇವರಿಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
  • ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ, ಕೇಳಿದ ಪ್ರಶ್ನೆಗಳಿಗೆ ಹಾರಿಕೆ ಉತ್ತರ ನೀಡುತ್ತಾರೆ, ಅದರಲ್ಲೂ ರಾಗಿಣಿಯಂತೂ ಮೂತ್ರಪರೀಕ್ಷೆಗೆ ಸಹಕರಿಸದೆ ನೀರನ್ನು ತುಂಬಿಸಿ ಕೊಟ್ಟಿದ್ದರು. ಹೀಗಿರುವಾಗ ಸಿಸಿಬಿ ಪೊಲೀಸರಿಗೆ ಸರಿಯಾಗಿ ತನಿಖೆ ಮಾಡಲು ಆಗುತ್ತಿಲ್ಲ ಅಂತ ಸರ್ಕಾರಿ ವಕೀಲರು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಟ್ಟರು.
  • ನಟಿಯರ ಪರ ವಕೀಲರು ಪೊಲೀಸ್ ಕಸ್ಟಡಿಯ ಅಗತ್ಯವಿಲ್ಲ ಎಂದು ವಾದ ಮಂಡಿಸಿದರು. ಆದರೆ ಸಿಸಿಬಿ ಪೊಲೀಸರ ಮನವಿಯನ್ನು ನ್ಯಾಯಾಧೀಶರು ಪುರಸ್ಕರಿಸಿ ಇನ್ನೂ ಮೂರು ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಿದರು. ನ್ಯಾಯಾಲಯದ ತೀರ್ಪು ಹೊರಬೀಳುತ್ತಿದ್ದಂತೆ ಇಬ್ಬರೂ ನಟಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
  • ಸಿಸಿಬಿಯವರು ಗ್ರಿಲ್ ಮಾಡುತ್ತಿರುವುದರ ಜೊತೆಗೆ ಇನ್ನು ಜಾರಿ ನಿರ್ದೇಶನಾಲಯ ಕೂಡ ಇವರನ್ನು ತನಿಖೆ ಮಾಡಲಿದೆ. ಹವಾಲ, ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ನಟಿಯರಿಬ್ಬರು ಇ.ಡಿ. ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಅಗತ್ಯ ಎದುರಾಗಿದೆ.

Leave a Reply

Your email address will not be published.

*

Latest from ಲೀಡ್ ನ್ಯೂಸ್

Go to Top