ಮತ್ತೆ ಸಿಲಿಂಡರ್ ಬೆಲೆ ಏರಿಕೆ
ಇಂದು ಮತ್ತೊಮ್ಮೆ ಸಿಲಿಂಡರ್ ದರದಲ್ಲಿ ಏರಿಕೆಯಾಗಿದೆ. ಪ್ರತಿ ಸಿಲಿಂಡರ್ ಗೆ ಇಪ್ಪತ್ತೈದು ರೂಪಾಯಿಯಷ್ಟು ಹೆಚ್ಚಾಗಿದ್ದು ಗ್ರಾಹಕರು ಮಾತಿಲ್ಲದೆ ಕತೆಯಿಲ್ಲದೆ 797 ರೂಪಾಯಿಗಳನ್ನು ಕೊಟ್ಟು ಖರೀದಿಸಬೇಕಾಗಿದೆ. ಹೇಗಿದೆ ನೋಡಿ ಹಣೆಬರಹ.
ಸನ್ಮಾನ್ಯ ಮೋದಿ ಸಾಹೇಬರು ಏನೇನೋ ಹೇಳಿದರು. ಆರಂಭದಲ್ಲಿ ಜನರನ್ನು ಬಕ್ರಾ ಮಾಡಲಿಕ್ಕೆ ಸಬ್ಸಿಡಿ ಕೊಟ್ಟರು. ನಂತರ ನಿಧಾನವಾಗಿ ಬೆಲೆ ಏರಿಸುತ್ತಾ ಹೋದರು. ಕಡೆಗೆ ಸಬ್ಸಿಡಿಯನ್ನೂ ಕಡಿತಗೊಳಿಸಿದರು. ಈಗ ನೋಡಿದರೆ ಮನಸ್ಸಿಗೆ ಬಂದಂತೆ ದರವನ್ನು ಹೆಚ್ಚಿಸುತ್ತಲೇ ಇದ್ದಾರೆ.
2020ರ ಮೇ ತಿಂಗಳಿನಲ್ಲಿ ಸಿಲಿಂಡರ್ ಬೆಲೆ 583 ರುಪಾಯಿ ಇತ್ತು. ಜುಲೈನಲ್ಲಿ 597 ರುಪಾಯಿ ಮಾಡಿದರು. ನಂತರ ಡಿಸೆಂಬರ್ 2020ರಲ್ಲಿ ಏಕ್ದಂ ನೂರು ರೂಪಾಯಿ ಏರಿಸುವ ಮೂಲಕ 697 ರೂಪಾಯಿ ಮಾಡಿದರು. ನಂತರ ಫೆಬ್ರವರಿ 4ರಂದು 722ಕ್ಕೆ ಏರಿಸಿದರು. ಅದಾಗಿ ಎರಡು ವಾರ ಕೂಡ ಆಗಿರಲಿಲ್ಲ. ಅಷ್ಟರಲ್ಲಿ ಮತ್ತೆ ಐವತ್ತು ರೂಪಾಯಿ ಏರಿತು. ಅಂದರೆ 772ಕ್ಕೆ ಏರಿಕೆಯಾಯಿತು. ಈಗ ಮತ್ತೆ ಇಪ್ಪತ್ತೈದು ರೂಪಾಯಿ ಹೆಚ್ಚಿಸಿದ್ದಾರೆ. ಅಂದರೆ ತೆಪ್ಪಗೆ 797 ರೂಪಾಯಿ ಕೊಡಬೇಕು.
ಇದು ಹೀಗೇ ಹೋದರೆ ಸಾವಿರ ರೂಪಾಯಿ ತಲುಪಿದರು ಆಶ್ಚರ್ಯವಿಲ್ಲ ಅಂತಿದಾರೆ ಆರ್ಥಿಕ ತಜ್ಞರು. ಜನರ ಕಣ್ಣಲ್ಲಿರುವ ಆತಂಕವನ್ನು ಒಮ್ಮೆ ಗಮನಿಸಿದರೂ ಸಾಕು ಮೋದಿ ಸಾಹೇಬರ ಮನಸ್ಸು ಕೊಂಚವಾದರೂ ಬದಲಾಗಬಹುದೇನೋ?