ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ಬೇಜವಾಬ್ದಾರಿ ಉತ್ತರ

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್
  • ಲಾಕ್ ಡೌನ್ ವೇಳೆ ಎಷ್ಟು ಜನ ವಲಸೆ ಕಾರ್ಮಿಕರು ಪ್ರಾಣ ತೆತ್ತರು ಮತ್ತು ಎಷ್ಟು ಮಂದಿ ಕೆಲಸ ಕಳೆದುಕೊಂಡರು ಎಂಬ ಪ್ರಶ್ನೆಗೆ ಕೇಂದ್ರ ಸರ್ಕಾರ ತಾರಮ್ಮಯ್ಯ ಆಡಿಸಿದೆ. ಅರ್ಥಾತ್ ನಮ್ಮ ಬಳಿ ಯಾವುದೇ ಮಾಹಿತಿ ಇಲ್ಲ ಅಂತ ಹೇಳಿ ನಿರುಮ್ಮಳವಾಗಿ ಜಾರಿಕೊಂಡಿದೆ.
  • ಇಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಿದೆ. ವಿರೋಧ ಪಕ್ಷಗಳು ಲಾಕ್ ಡೌನ್ ವೇಳೆ ಹೊಟ್ಟೆಗಿಲ್ಲದೆ ಸತ್ತ ವಲಸಿಗರ ಬಗ್ಗೆ ಪ್ರಶ್ನೆ ಮಾಡಿದವು. ಆಗ ಸರ್ಕಾರವು ಅಂತಹ ಯಾವುದೇ ಮಾಹಿತಿಯು ಲಭ್ಯವಿಲ್ಲ ಎಂದು ತಿಳಿಸಿತು. ಇದೇ ವೇಳೆ ರೇಷನ್ ಪೂರೈಕೆ ವಿಚಾರದಲ್ಲಿ ಯಾವ್ಯಾವ ರಾಜ್ಯಕ್ಕೆ ಎಷ್ಟೆಷ್ಟು ನೀಡಲಾಗುತ್ತಿದೆ ಎಂಬುದರ ಕುರಿತೂ ಮಾಹಿತಿ ಇಲ್ಲ ಅಂತ ಸರ್ಕಾರ ಹೇಳಿದೆ.
  • ಲಾಕ್ ಡೌನ್ ಸಂದರ್ಭದಲ್ಲಿ ವಲಸಿಗ ಕಾರ್ಮಿಕರ ಸಮಸ್ಯೆ ನಿವಾರಣೆ ಮಾಡಲು ಸರ್ಕಾರ ವಿಫಲವಾಗಿದೆ ಎಂಬ ವಿರೋಧ ಪಕ್ಷಗಳು ಆರೋಪ ಮಾಡಿದವು.ಭಾರತ ಒಂದು ದೇಶವಾಗಿ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿತು.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

Go to Top