ಹಾಯ್ ಬೆಂಗಳೂರ್

ನಟ ಶಶಿಕುಮಾರ್ ಪುತ್ರನ ಮೊದಲ ಸಿನಿಮಾದ ಚಿತ್ರೀಕರಣ ಸಂಪೂರ್ಣ

ಜಿಸಿವಿ ಪ್ರೊಡಕ್ಷನ್ ಲಾಂಛನದಲ್ಲಿ ಜಿ. ರಾಮಾಂಜಿನಿ ಕಥೆ ಬರೆದು ನಿರ್ಮಿಸುತ್ತಿರುವ ಓ ಮೈ ಲವ್ ಚಿತ್ರದ ಶೂಟಿಂಗ್ ಬೆಂಗಳೂರು ಸುತ್ತ ಮುತ್ತ ನಡೆಯುವುದರೊಂದಿಗೆ ಮೊದಲ ಹಂತರ ಚಿತ್ರೀಕರಣವನ್ನು ಪೂರೈಸಿದೆ. ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.

ಲವ್, ಫ್ಯಾಮಿಲಿ, ಎಂಟರ್ ಟೈನರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಬಳ್ಳಾರಿ ದರ್ಬಾರ್, ತೂಫಾನ್ ಹಾಗೂ ೧೮-೨೫ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಚಿತ್ರಕತೆ-ಸಂಭಾಷಣೆ ಬರೆದು ಈ  ನಿರ್ದೇಶಿಸುತ್ತಿದ್ದಾರೆ.

ಚರಣ್ ಅರ್ಜುನ್ ಸಂಗೀತ, ರಿಯಲ್ ಸತೀಶ್ ಸಾಹಸ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿ. ಮುರಳಿ ನೃತ್ಯ ನಿರ್ದೇಶನ, ಡಿ. ಮಲ್ಲಿಕ್ ಸಂಕಲನ,, ಜನಾರ್ದನ್ ಕಲಾ ನಿರ್ದೇಶನವಿದೆ. ಅಕ್ಷಿತ್ ಶಶಿಕುಮಾರ್, ಕೀರ್ತಿ ಕಲ್ಕೆರೆ, ದೀಪಿಕಾ ಆರಾಧ್ಯ, ಪೃಥ್ವಿರಾಜ್, ಎಸ್. ನಾರಾಯಣ್, ಸಾಧು ಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ , ಶಿಲ್ಪಾ, ರವಿ ರಾಮ್ ಕುಮಾರ್ ತಾರಾ ಬಳಗದಲ್ಲಿದ್ದಾರೆ.

Leave a Reply

Your email address will not be published. Required fields are marked *