ದೆಹಲಿ ಪೊಲೀಸರ ಭರ್ಜರಿ ಬೇಟೆ

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್
  • ದೆಹಲಿ ಪೊಲೀಸರು ಇಂದು  ಬೆಳ್ಳಂಬೆಳಗ್ಗೆ ಭರ್ಜರಿ ಬೇಟೆಯಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ ದಂಧೆಯಲ್ಲಿ ತೊಡಗಿದ್ದ ಜಾಲವನ್ನು ಭೇದಿಸಿದ್ದಾರೆ. ಇಪ್ಪತ್ಮೂರು ಕೆಜಿ ಹೆರಾಯಿನ್ ವಶಕ್ಕೆ ಪಡೆದಿದ್ದಾರೆ. ಇದರ ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ ತೊಂಬತ್ತು ಕೋಟಿ ರುಪಾಯಿಗಳು. ಈ ದಂಧೆಯ ಕಿಂಗ್ ಪಿನ್ ಸಹಿತ ಐವರನ್ನು ಬಂಧಿಸಿದ್ದಾರೆ.
  • ವಶಪಡಿಸಿಕೊಂಡ ಹೆರಾಯಿನ್

    ಎಸಿಪಿ ಅತ್ತರ್ ಸಿಂಗ್ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಗಳಾದ ಶಿವಕುಮಾರ್ ಮತ್ತು ಕರಮ್ ವೀರ್ ಸಿಂಗ್ ಅವರು ಈ ಕಾರ್ಯಾಚರಣೆ ನಡೆಸಿದ್ದು ಉದಯ್ ಕುಮಾರ್ (30), ಸುಬೋಧ್ ದಾಸ್ (26), ಸಂಜೀವ್ ಕುಮಾರ್ (25), ನಿತ್ಯಾನಂದ್ (28) ಮತ್ತು ರಾಹುಲ್ (30) ಎಂಬ ದಂಧೆಕೋರರನ್ನು ಹೆಡೆಮುರಿಗೆ ಕಟ್ಟಿದ್ದಾರೆ.

  • ಇವರು ಕಾರಿನಲ್ಲಿರುವ ಮ್ಯೂಸಿಕ್ ಸಿಸ್ಟಮ್ ಅಡಿಯಲ್ಲಿ ಸೀಕ್ರೇಟ್ ಕಂಪಾರ್ಟ್ ಮೆಂಟ್ ಮಾಡಿಕೊಂಡು ಅದರೊಳಗೆ ಡ್ರಗ್ಸ್ ಬಚ್ಚಿಡುತ್ತಿದ್ದರು. ಅಸ್ಸಾಂನ ಬೋಕಾಜಾನ್ ಎಂಬಲ್ಲಿಂದ ಆಪರೇಟ್ ಮಾಡುತ್ತಿದ್ದ ಇವರಿಗೆ ಮ್ಯಾನ್ಮಾರ್ ನಿಂದ ಡ್ರಗ್ಸ್ ಸಪ್ಲೈ ಆಗುತ್ತಿತ್ತು. ನಂತರ ದೇಶದ ಅನೇಕ ಭಾಗಗಳಿಗೆ ರವಾನೆಯಾಗುತ್ತಿತ್ತು.
  • ಬಂಧಿತರ ಮೂಲಕ ಈ ಜಾಲದ ಬೇರು ಎಲ್ಲಿ ತನಕ ಹಬ್ಬಿದೆ ಎಂಬುದನ್ನು ಕಂಡುಹಿಡಿಯಬೇಕಿದೆ.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

Go to Top