ಹಾಯ್ ಬೆಂಗಳೂರ್

ಆಸ್ಕರ್ ರೇಸ್ ನಲ್ಲಿ ತಮಿಳಿನ ಸೂರ್ಯ ಚಿತ್ರ ‘ಸೂರರೈ ಪೋಟ್ರು’

ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್ ಹೊಸದೊಂದು ಸುದ್ದಿ ಹೊರಗೆಡವಿದೆ. 93ನೇ ಆಸ್ಕರ್ ಪ್ರಶಸ್ತಿಗೆ ಜಗತ್ತಿನಾದ್ಯಂತ ಒಟ್ಟು 366 ಸಿನೆಮಾಗಳು ರೇಸ್ ನಲ್ಲಿ ಬಂದು ನಿಂತಿವೆ. ಆ 366ರ ಪೈಕಿ ಖ್ಯಾತ ನಟ ಸೂರ್ಯ ನಿರ್ಮಾಣ ಮತ್ತು ಅಭಿನಯದ ತಮಿಳಿನ ‘ಸೂರರೈ ಪೋಟ್ರು’ ಕೂಡ ಒಂದು.

ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರು ಏರ್ ಡೆಕ್ಕನ್ ಸ್ಥಾಪಿಸಿದ ಯಶೋಗಾಥೆಯನ್ನು ಮೂಲಕಥೆಯನ್ನಾಗಿಸಿಕೊಂಡು ಅತ್ಯದ್ಭುತ ಚಿತ್ರ ನಿರ್ಮಿಸಿರುವ ಸೂರ್ಯ ಈ ಚಿತ್ರದ ಮೂಲಕ ಭಾರತೀಯರ ಮನಸ್ಸುಗಳನ್ನು ತಟ್ಟಿದ್ದಾರೆ. ನಟನೆ, ನಿರ್ದೇಶನ ಸೇರಿದಂತೆ ಅನೇಕ ವಿಭಾಗಗಲ್ಲಿ ಚಿತ್ರ ಆಸ್ಕರ್ ರೇಸ್ ಗೆ ಹೋಗಿದೆ. ಯಾವ ವಿಭಾಗದಲ್ಲಿ ಗೆದ್ದರೂ ಕೂಡ ಅದು ನಮ್ಮ ದೇಶಕ್ಕೆ ಹೆಮ್ಮೆಯೇ ಸರಿ.

ತಮಿಳಿನಲ್ಲಿ ಈ ಚಿತ್ರ ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿದೆ. ತೆಲುಗು, ಕನ್ನಡ ಮಲಯಾಳಂಗೆ ವಾಯ್ಸ್ ಡಬಿಂಗ್ ಕೂಡ ಮಾಡಲಾಗಿದೆ. ಅಮೆಜಾನ್ ಪ್ರೈಮ್ ನಲ್ಲಿ ಲಕ್ಷಾಂತರ ಮಂದಿ ಸಿನೆಮಾವನ್ನು ವೀಕ್ಷಿಸಿದ್ದಾರೆ. ಮೊನ್ನೆ ಚಿತ್ರಮಂದಿರಗಳೆಲ್ಲಾ ಓಪನ್ ಆದ ಮೇಲೆ ಇದು ಕೂಡ ತೆರೆಕಂಡಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕನ್ನಡಿಗ ಕ್ಯಾಪ್ಟನ್ ವಿ.ಗೋಪಿನಾಥ್ ಅವರ ಜೀವನ ಚರಿತ್ರೆ ಸಿನೆಮಾ ಆಗಿ ಯಶಸ್ಸು ಕಂಡಿರುವುದರ ಜೊತೆಗೆ ಹೀಗೆ ಜಗತ್ತಿನ ಅತ್ಯುನ್ನತ ಪುರಸ್ಕಾರವಾದ ಆಸ್ಕರ್ ರೇಸ್ ಗೆ ಸೇರಿಕೊಂಡಿರುವುದು ಕನ್ನಡಿಗರಾದ ನಮಗೆಲ್ಲ ಹೆಮ್ಮೆಯೇ ಸರಿ.

Leave a Reply

Your email address will not be published. Required fields are marked *