ತಬ್ಲೀಘಿ ಜಮಾತ್ ಮಸೀದಿ

ದೆಹಲಿಯ ತಬ್ಲೀಘಿ ಜಮಾತ್ ಮಸೀದಿಯಿಂದ ವ್ಯಾಪಿಸಿತೆ ಕೊರೋನಾ?

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್

ಕೆಲ ಮೂಲಗಳ ಪ್ರಕಾರ ಮಾರ್ಚ್ 23ರಂದು ಸುಮಾರು ಒಂದೂವರೆ ಸಾವಿರ ಜನರನ್ನು ಅವರವರ ಊರಿಗೆ ಕಳಿಸಲಾಗಿದೆ. ಆ ಒಂದೂವರೆ ಸಾವಿರ ಮಂದಿ ಪೈಕಿ ಎಷ್ಟು ಜನಕ್ಕೆ ಕೊರೋನಾ ಇತ್ತು ಎಂಬುದು ಗೊತ್ತಿಲ್ಲ. ಈಗ ಅವರನ್ನು ಹುಡುಕುವ ಕೆಲಸ ನಡೆಯುತ್ತಿದೆ. ಈ ಮಧ್ಯೆ ಮಾರ್ಚ್ 20ರಂದು ತೆಲಂಗಾಣಾದಲ್ಲಿ ಪತ್ತೆಯಾದ ಹತ್ತು ಮಂದಿ ಇಂಡೋನೇಷ್ಯಾ ಪ್ರಜೆಗಳಲ್ಲಿ ಕೋವಿಡ್ ಕಂಡುಬಂದಿದೆ.

ದೆಹಲಿಯ ನಿಜಾಮುದ್ದಿನ್ ನಲ್ಲಿರುವ ತಬ್ಲೀಘಿ ಜಮಾತ್ ಮಸೀದಿ ಈಗ ವಿವಾದದ ಕೇಂದ್ರಬಿಂದುವಾಗಿದೆ. ಅಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಮೊದಲೇ ನಿಗದಿತವಾಗಿರುತ್ತದೆ. ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ. ಹಾಗೆಯೇ ಕಳೆದ ತಿಂಗಳು 13ರಂದು ಇಲ್ಲಿ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದೆ. ಈ ವೇಳೆಗಾಗಲೇ ದೇಶದಲ್ಲಿ ಕೊರೋನಾ ಕಾಲಿಟ್ಟಿತ್ತು. ಅದಾಗಲೇ ಕೇರಳದಲ್ಲಿ ಒಂದು ಕೇಸ್ ಪತ್ತೆಯಾಗಿತ್ತು. ಸಭೆ ಸಮಾರಂಭಗಳನ್ನು ಮಾಡಬಾರದು, ಜನರು ಗುಂಪು ಗುಂಪಾಗಿ ಸೇರಬಾರದು ಎಂಬ ಒಂದು ಅಘೋಷಿತ ನಿಯಮ ಜಾರಿಯಲ್ಲಿತ್ತು. ಆದರೆ ಅದನ್ನು ಇಡೀ ದೇಶದ ಜನರು ಗಂಭೀರವಾಗಿ ತೆಗೆದುಕೊಂಡೇ ಇರಲಿಲ್ಲ. ಅದೇ ರೀತಿ ತಬ್ಲೀಘಿ ಜಮಾತ್ ಮಸೀದಿಯಲ್ಲೂ ಕಾರ್ಯಕ್ರಮ ನಡೆಯುತ್ತಿತ್ತು. ಹೀಗಿರುವಾಗಲೇ ಮಾರ್ಚ್ 22ರಂದು ಒಂದು ದಿನ ಮಟ್ಟಿಗೆ ಜನತಾ ಕರ್ಫ್ಯೂ ಅಂತ ಪ್ರಧಾನಿ ಮೋದಿ ಘೋಷಿಸಿದರು. ರಾತ್ರಿ 9 ಗಂಟೆ ತನಕ ಯಾರೂ ಹೊರಗಡೆ ಬರಬಾರದು ಅಂತ ಆಜ್ಞೆ ಮಾಡಿದರು. ಇದರ ಬೆನ್ನಿಗೆ ಮರುದಿನವೇ ಕೇಜ್ರಿವಾಲ್ ಸರ್ಕಾರ ಮಾರ್ಚ್ 23ರಿಂದ ಮಾರ್ಚ್ 31ರ ತನಕ ಲಾಕ್ ಡೌನ್ ಆದೇಶ ಹೊರಡಿಸಿತು. ತಕ್ಷಣವೇ ಎಲ್ಲ ರೈಲುಗಳೂ ಬಂದ್ ಆದವು. ಮಾರ್ಚ್ 24ರಂದು ಪ್ರಧಾನಿ ಮೋದಿ ಮತ್ತೆ 21 ದಿನಗಳ ಕಾಲ ಇಡೀ ದೇಶವನ್ನೇ ಲಾಕ್ ಡೌನ್ ಮಾಡಿ ಅಂತ ಹೇಳುತ್ತಿದ್ದಂತೆಯೇ ಅತಂತ್ರ ಸ್ಥಿತಿ ನಿರ್ಮಾಣವಾಗಿಬಿಟ್ಟಿತು.

ಮಾರ್ಚ್ 24ಕ್ಕೆ ಸ್ಥಳೀಯ ಪೊಲೀಸ್ ಇನ್ಸ್ ಪೆಕ್ಟರ್ ಮಸೀದಿಯನ್ನು ಬಂದ್ ಮಾಡುವಂತೆ ನೋಟಿಸ್ ಜಾರಿ ಮಾಡಿದರು. ಮಾರ್ಚ್ 25ರಂದು ತಹಸೀಲ್ದಾರ್ ತನ್ನ ಜೊತೆಗೆ ವೈದ್ಯರ ತಂಡವನ್ನು ಕರೆದುಕೊಂಡು ಬಂದು ಮಸೀದಿಯಲ್ಲಿ ಉಳಿದಿದ್ದವರ ತಪಾಸಣೆಯನ್ನು ನಡೆಸಿದರು. ಮತ್ತೆ ಮಾರ್ಚ್ 27ಕ್ಕೆ ಆರು ಮಂದಿಯನ್ನು ಮೆಡಿಕಲ್ ಚೆಕಪ್ ಮಾಡಲಾಯಿತು. ಮಾರ್ಚ್ 28ರಂದು ಹದಿಮೂರು ಮಂದಿಯನ್ನು ರಾಜೀವ್ ಗಾಂಧಿ ಕ್ಯಾನ್ಸರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತಪಾಸಣೆ ಮಾಡಿಸಲಾಯಿತು. ಅದೇ ದಿನ ಲಜಪತ್ ನಗರದ ಎಸಿಪಿ ಮಸೀದಿಯನ್ನು ಖಾಲಿ ಮಾಡುವಂತೆ ನೋಟಿಸ್ ನೀಡಿದರು. ಇದಕ್ಕೆ ಕೂಡಲೇ ಉತ್ತರಿಸಿದ ಮಸೀದಿಯ ಆಡಳಿತ ಮಂಡಳಿ ಪ್ರಧಾನಿಯ ಆದೇಶವನ್ನು ಉಲ್ಲೇಖಿಸಿ ನಾವು ಇಲ್ಲಿಂದ ಖಾಲಿ ಮಾಡುವುದಿಲ್ಲ ಎಂದು ಹೇಳಿತು.  ಇದಾದ ನಂತರ ಮಾರ್ಚ್ 29ರಂದು ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಉಳಿದವರನ್ನು ಕ್ವಾರಂಟೈನ್ ಮಾಡಲಾಯಿತು. ಅಸಲಿಗೆ ಇದರ ಹಿಂದೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೆಲಸ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.

ಇದಿಷ್ಟೇ ಆಗಿದ್ದಿದ್ದರೆ ಏನೂ ಸಮಸ್ಯೆಯೇ ಇರುತ್ತಿರಲಿಲ್ಲ. ಆದರೆ ಕೆಲ ಮೂಲಗಳ ಪ್ರಕಾರ ಮಾರ್ಚ್ 23ರಂದು ಸುಮಾರು ಒಂದೂವರೆ ಸಾವಿರ ಜನರನ್ನು ಅವರವರ ಊರಿಗೆ ಕಳಿಸಲಾಗಿದೆ. ಆ ಒಂದೂವರೆ ಸಾವಿರ ಮಂದಿ ಪೈಕಿ ಎಷ್ಟು ಜನಕ್ಕೆ ಕೊರೋನಾ ಇತ್ತು ಎಂಬುದು ಗೊತ್ತಿಲ್ಲ. ಈಗ ಅವರನ್ನು ಹುಡುಕುವ ಕೆಲಸ ನಡೆಯುತ್ತಿದೆ. ಈ ಮಧ್ಯೆ ಮಾರ್ಚ್ 20ರಂದು ತೆಲಂಗಾಣಾದಲ್ಲಿ ಪತ್ತೆಯಾದ ಹತ್ತು ಮಂದಿ ಇಂಡೋನೇಷ್ಯಾ ಪ್ರಜೆಗಳಲ್ಲಿ ಕೋವಿಡ್ ಕಂಡುಬಂದಿದೆ. ಇವರೆಲ್ಲರೂ ದೆಹಲಿಯ ನಿಜಾಮುದ್ದಿನ್ ಸಭೆಯಲ್ಲಿ ಭಾಗಿಯಾಗಿದ್ದವರು ಎಂದು ಹೇಳಲಾಗ್ತಿದೆ.

ಒಟ್ಟಿನಲ್ಲಿ ತಬ್ಲಘೀ ಜಮಾತ್ ಮಸೀದಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಂಡು ಯಾರನ್ನೂ ಹೊರಕ್ಕೆ ಬಿಟ್ಟಿರದೇ ಇದ್ದಿದ್ದರೆ ಸಮಸ್ಯೆ ಇಷ್ಟೊಂದು ಉಲ್ಬಣವಾಗುತ್ತಿರಲಿಲ್ಲವೇನೋ?

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

ಹತ್ತು ಸಾವಿರ ಸ್ವಯಂ ಸೇವಕರ ನೇಮಕ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ನಿರ್ಧಾರಕ್ಕೆ ಬಂದಿದೆ. ನಗರದ ಎಲ್ಲ
Go to Top