ಖಾಸಗಿ ವಾಹಿನಿ ನನ್ನ ತೇಜೋವಧೆ ಮಾಡಿದೆ: ಸಚಿವ ಸುರೇಶ್ ಕುಮಾರ್

in ಜಿಲ್ಲಾ ಸುದ್ದಿಗಳು/ಲೀಡ್ ನ್ಯೂಸ್

ಮಕ್ಕಳಿಗೆ ಶಾಲೆ ಆರಂಭಿಸಬೇಕೋ ಬೇಡವೋ ಎಂಬುದರ ಕುರಿತು ಅನೇಕ ಗೊಂದಲಗಳು ಮೂಡಿವೆ. ಮೇ 17ನೇ ತಾರೀಖಿನಂದು ಈ ಬಗ್ಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಜನರ ಅಭಿಪ್ರಾಯವನ್ನು ಕೇಳಿದ್ದರು ಸಚಿವ ಸುರೇಶ್ ಕುಮಾರ್. ಸಾವಿರಾರು ಜನರು ಅದಕ್ಕೆ ಉತ್ತರಿಸಿ ಯಾವುದೇ ಕಾರಣಕ್ಕೂ ಐದನೇ ತರಗತಿಯವರೆಗೂ ಶಾಲೆಯನ್ನು ತೆರೆಯದಿರಿ ಅಂತ ಆಗ್ರಹಿಸಿದ್ದರು. ಆದರೆ ಸಚಿವರು ತಜ್ಞರ ಒಂದು ಸಮಿತಿ ರಚಿಸಿದರು. ಆ ಸಮಿತಿಯವರು ಅದೇನು ದೃಷ್ಟಿಯಲ್ಲಿಟ್ಟುಕೊಂಡು ಶಿಫಾರಸ್ಸು ನೀಡಿದರೋ ಏನು ಕತೆಯೋ, ಇದೀಗ ಅದರ ವಿರುದ್ಧ ಖಾಸಗಿ ವಾಹಿನಿಯೊಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಇದಕ್ಕೆ ಸುರೇಶ್ ಕುಮಾರ್ ಅವರೇ ನೇರ ಕಾರಣ. ಅವರೇ ಈ ರೀತಿಯಾಗಿ ವರದಿ ಬೇಕು ಎಂದು ತರಿಸಿಕೊಂಡಿದ್ದಾರೆ ಎಂದು ಆರೋಪಿಸಿದೆ. ಇದರ ಬೆನ್ನಲ್ಲೇ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿರುವ ಸಚಿವ ಸುರೇಶ್ ಕುಮಾರ್ ಅವರು ಸರ್ಕಾರ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಅಷ್ಟರಲ್ಲೇ ಖಾಸಗಿ ವಾಹಿನಿಯೊಂದು ನನ್ನ ತೇಜೋವಧೆ ಮಾಡಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಮುಂದೆ ಏನಾಗುತ್ತದೆ ಎಂಬುದೇ ಪಾಲಕರ ಚಿಂತೆಯಾಗಿದೆ.

Leave a Reply

Your email address will not be published.

*

Latest from ಜಿಲ್ಲಾ ಸುದ್ದಿಗಳು

ಕಾಪಾಡು ಸಿಗಂಧೂರು ಚೌಡೇಶ್ವರಿ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಸಿಗಂಧೂರು ಚೌಡೇಶ್ವರಿ ದರ್ಶನಕ್ಕೆಂದು ತೆರಳಿದ್ದ ಜನರು ಸಂಕಷ್ಟದ ಸ್ಥಿತಿಯಲ್ಲಿ ಸಿಲುಕಿದ್ದಾರೆ.
Go to Top