ಹಾಯ್ ಬೆಂಗಳೂರ್

ಫೀಸ್ ಕಟ್ಟಿಲ್ಲ ಅಂತ ಶಾಲೆಯವರು ಮನೆಗೆ ಕಳಿಸಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

  • ಈಗಿನ ಕಾಲದ ವಿದ್ಯಾರ್ಥಿನಿಯರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಯಾವ ಹುಡುಗಿ ಎಷ್ಟು ಸೂಕ್ಷ್ಮ ಮನಸ್ಸಿನವಳಾಗಿರುತ್ತಾಳೆ ಅಂತ ಜಡ್ಜ್ ಮಾಡುವುದು ಸುಲಭವಲ್ಲ. ಒಮ್ಮೊಮ್ಮೆ ಹೆತ್ತ ತಂದೆ ತಾಯಿಗಳಿಗೆ ತಮ್ಮ ಮಗಳ ಮನಸ್ಸನ್ನು ಅರಿಯಲು ಸಾಧ್ಯವಾಗುವುದಿಲ್ಲ.
  • ಯಾಕೆ ಈ ಮಾತು ಹೇಳಿದೆ ಅಂದರೆ ಹೈದರಾಬಾದ್ ನಲ್ಲಿ ಒಂದು ದುರ್ಘಟನೆ ನಡೆದಿದೆ. ಶಾಲೆ ಫೀಸ್ ಕಟ್ಟಿಲ್ಲ ಅಂತ ಸ್ಕೂಲ್ ನವರು ಎಲ್ಲ ವಿದ್ಯಾರ್ಥಿಗಳ ಮುಂದೆ ಹುಡುಗಿಗೆ ಅವಮಾನ ಆಗುವ ರೀತಿಯಲ್ಲಿ ಮಾತನಾಡಿಬಿಟ್ಟಿದ್ದಾರೆ. ಅವಮಾನ ಮಾಡಬೇಕು ಅನ್ನುವುದು ಅವರ ಉದ್ದೇಶವಾಗಿರಲಿಕ್ಕಿಲ್ಲ. ಆದರೆ ಅದನ್ನು ಈ ಹುಡುಗಿ ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾಳೆ. ಕಣ್ಣೀರಿಟ್ಟುಕೊಂಡು ಮನೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟಿದ್ದಾಳೆ.
  • ಹತ್ತನೇ ತರಗತಿ ಓದುತ್ತಿದ್ದ ಹುಡುಗಿ ಹೆಸರು ಯಶಸ್ವಿನಿ ಅಂತ. ಆಕೆಯ ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದಾರೆ. ಮಗಳನ್ನು ಕಳೆದುಕೊಂಡ ಅವರ ಸಂಕಟ ಹೇಳತೀರದು.
  • “ಯಶಸ್ವಿನಿಗೆ ಶಾಲೆ ಆಡಳಿತ ಮಂಡಳಿ ಶುಲ್ಕ ಪಾವತಿಸುವಂತೆ ಸೂಚಿಸಿತ್ತು. ಆದರೆ ಹಣವಿಲ್ಲದೇ ವಿದ್ಯಾರ್ಥಿನಿಗೆ ಶುಲ್ಕ ಪಾವತಿಸಲು ಸಾಧ್ಯವಾಗಿಲ್ಲ. ಆ ಬಳಿಕ ಯಶಸ್ವಿನಿ ಶಾಲೆಗೆ ಹಾಜರಾಗಲು ಆಡಳಿತ ಮಂಡಳಿ ಅವಕಾಶವನ್ನೂ ಸಹ ನೀಡಿರಲಿಲ್ಲ. ಇದೇ ಕಾರಣಕ್ಕೆ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
  • ಏನೇ ಆಗಲಿ ನಮ್ಮ ಸರ್ಕಾರವಾಗಲಿ, ಶಾಲೆಯವರಾಗಲಿ ಇಂತಹ ವಿದ್ಯಾರ್ಥಿಗಳಿಗೆ ಕೊಂಚ ರಿಯಾಯಿತಿ ತೋರಿಸಬೇಕು. ಈಗ ನೋಡಿ ಒಂದು ಅಮೂಲ್ಯವಾದ ಜೀವ ಹೋಯಿತು. ಬೇಕು ಅಂದರೆ ವಾಪಸ್ ಬರುತ್ತಾ. ಮಗಳನ್ನು ಕಳೆದುಕೊಂಡ ತಂದೆ-ತಾಯಿಗಳ ಕಷ್ಟವನ್ನು ಕೇಳೋರು ಯಾರು ಹೇಳಿ.

Leave a Reply

Your email address will not be published. Required fields are marked *