ಹಾಯ್ ಬೆಂಗಳೂರ್

ಸ್ಟೀಮ್ ಇಂಜಿನ್ ಅನ್ವೇಷಣೆಗೆ

ಈಗ ಹೊಸದಾಗಿ ಕಾರ್ಖಾನೆ ಸ್ಥಾಪಿಸುವ ಎಂಟರ್‌ಪ್ರೆನ್ಯೂನರ್‌ಗಳಿಗೆ ಸಾಲ ನೀಡಲು ಬ್ಯಾಂಕ್‌ಗಳು ತುದಿಗಾಲ ಮೇಲೆ ನಿಂತಿರುತ್ತವೆ ಎಂಬುದು ಸತ್ಯ. ಉಗಿ ಬಂಡಿ ಅರ್ಥಾತ್ ಸ್ಟೀಮ್ ಇಂಜಿನ್ ರೇಲನ್ನು ಕಂಡು ಹಿಡಿದು ಪ್ರಪಂಚಕ್ಕೆ ದೊಡ್ಡ ಕೊಡುಗೆ ನೀಡಿದ ಜೇಮ್ಸ್ ವ್ಯಾಟ್ ಎಂಬ ತಂತ್ರಜ್ಞನ ಹಿನ್ನೆಲೆ ಹಾಗೂ ಈತನ ಸಂಶೋಧನೆಗೆ ನೆರವು ನೀಡಿದ ಮ್ಯಾಥ್ಯೂ ಬುಲೆಟಿನ್ ಎಂಬಾತ ವ್ಯಾಟ್‌ನ ಸಂಪರ್ಕಕ್ಕೆ ಬರದಿದ್ದರೆ ಇಂಥದೊಂದು ಆವಿಷ್ಕಾರ ಸಾಧ್ಯವಾಗುತ್ತಿತ್ತಾ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ಜೇಮ್ಸ್ ವ್ಯಾಟ್‌

ಮೂಲತಃ ಇಂಗ್ಲಂಡಿನ ಗ್ಲಾಸ್ಗೋ ಎಂಬ ಹಳ್ಳಿಯವನಾದ ಜೇಮ್ಸ್ ವ್ಯಾಟ್‌ನ ಅಪ್ಪ ಸಣ್ಣ ಹಡಗುಗಳನ್ನು ತಯಾರಿಸುವ ಕುಲುಮೆ ನಡೆಸುತ್ತಿದ್ದ. ಮಗ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲಿ ಎಂದು ಲಂಡನ್‌ಗೆ ಕಳುಹಿಸಿ `ವೃತ್ತಿ ಶಿಕ್ಷಣ ಕೋರ್ಸ್‌ಗೆ’ ಸೇರಿಸಿದ. ದೀರ್ಘ ಅವಧಿಯ ಶಿಕ್ಷಣ ಪಡೆಯಲು ಇಚ್ಛಿಸದ ಜೇಮ್ಸ್, ಅಪ್ಪ ಮಾಡುತ್ತಿದ್ದ ವೃತ್ತಿ ಕಸುಬಾದ ಹಡಗನ್ನು ನಿರ್ಮಿಸುವ ಹಾಗೂ ಶಿಥಿಲಗೊಂಡ ಹಡಗನ್ನು ಒಡೆದು ಹಾಕುವ ತಂತ್ರಜ್ಞಾನದ ಬಗ್ಗೆ ಡಾಕ್‌ಯಾರ್ಡ್‌ನಲ್ಲಿ ಕುತೂಹಲದಿಂದ ಅಧ್ಯಯನ ನಡೆಸಿದ. ತನ್ನ ಅನುಭವ ಮಾತ್ರದಿಂದಲೇ ಮೇಧಾವಿಯಾಗಿದ್ದ ಜೇಮ್ಸ್ ವ್ಯಾಟ್‌ಗೆ ಕಾರ್ಖಾನೆ ತೆಗೆಯಲು ಪದವೀಧರನಲ್ಲ ಎಂಬ ಕಾರಣ ನೀಡಿ ಇಂಗ್ಲಂಡಿನ ವಸಾಹತುಶಾಹಿ ಆಡಳಿತ ಆರ್ಥಿಕ ನೆರವು ನೀಡಲು ನಿರಾಕರಿಸಿತು. ಆಗ ಈತನ ಸಂಪರ್ಕಕ್ಕೆ ಬಂದದ್ದು ಬರ್ಮಿಂಗ್ ಹ್ಯಾಮ್‌ನ ಬೆಳ್ಳಿ ಕರಗಿಸುವ ಹಾಗೂ ಅದರ ಮುಖೇನ ನೂತನ ವಿನ್ಯಾಸದ ಆಭರಣಗಳನ್ನು ತಯಾರಿಸುವುದರಲ್ಲಿ ಪ್ರಸಿದ್ಧಿ ಪಡೆದಿದ್ದ ವ್ಯಾಪಾರಿಯೊಬ್ಬನ ಮಗನಾಗಿದ್ದ ಮ್ಯಾಥ್ಯೂ ಬುಲೆಟಿನ್ ಎಂಬಾತ. ಮೊದಲ ಭೇಟಿಯಲ್ಲೇ ಜೇಮ್ಸ್  ವ್ಯಾಟ್‌ನ ಪ್ರತಿಭೆ ಮನಗಂಡ ಮ್ಯಾಥ್ಯೂ ಆತನ ಸಂಶೋಧನೆಗೆ ಆರ್ಥಿಕ ನೆರವು ನೀಡಿದ. ಅಧ್ಯಯನಶೀಲತೆ ಇದ್ದ ಜೇಮ್ಸ್ ವ್ಯಾಟ್ ಹಾಗೂ ಹಣ ಹೂಡುವ ಧಣಿ ಮ್ಯಾಥ್ಯೂ ಇವರಿಬ್ಬರ ಕಾರಣಕ್ಕೆ ಪ್ರಪಂಚದ ಮೊದಲ ಸ್ಟೀಮ್ ಇಂಜಿನ್ ಹಳಿಗಳ ಮೇಲೆ ಸಂಚರಿಸಿತು.

Leave a Reply

Your email address will not be published. Required fields are marked *