ಅಂತ್ಯವಲ್ಲ ಆರಂಭ

in ಸಿನೆಮಾ ಪುಟ

ಅಂತ್ಯವಲ್ಲ ಆರಂಭ

ಶ್ರುತಿ ಹರಿಹರನ್ ಎಂಬ ಮಿಟೂ ಖ್ಯಾತಿಯ ನಟಿ ತಾನು ಊರು ಬಿಟ್ಟು ವರ್ಷ ಕಳೆದಿದೆ ಎಂದು ಸುದ್ದಿ ಮಾಡಿದ್ದರೂ ಆಗಾಗ ಅವರ ಒಂದೊಂದು ಸಿನೆಮಾ ಬಿಡುಗಡೆ ಆಗುತ್ತಲೇ ಇದೆ. ಹೀಗೆ ಇವರು ಗುಟ್ಟಾಗಿ ನಟಿಸಿದ ಇನ್ನೊಂದು ಸಿನೆಮಾ ‘ಅಂತ್ಯವಲ್ಲ ಆರಂಭ’.

ನಟ ಸಂಚಾರಿ ವಿಜಯ್ ಜೊತೆ ಶ್ರುತಿ ಹರಿಹರನ್ ಗುಟ್ಟಾಗಿ ಬಂದು ನಟಿಸಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಈ ಸಿನೆಮಾ ಬಿಡುಗಡೆ ಆಗಲಿದೆ. ಹದಿನೈದು ದಿನಗಳ ಹಿಂದಷ್ಟೇ ಈ ಚಿತ್ರದ ಆಡಿಯೋ ಬಿಡುಗಡೆ ನಡೆದಿದ್ದು ಆ ದಿನ ಕೂಡ ಶ್ರುತಿ ಹರಿಹರನ್ ಚಿತ್ರತಂಡದ ಯಾರೊಬ್ಬರ ಸಂಪರ್ಕಕ್ಕೂ ಸಿಕ್ಕಿಲ್ಲವಂತೆ. ‘ನಾತಿಚರಾಮಿ’ ಚಿತ್ರದ ನಂತರ ‘ಮನೆ ಮಾರಾಟಕ್ಕಿದೆ’ ಎಂಬ ಇನ್ನೊಂದು ಸಿನೆಮಾದಲ್ಲಿ ನಟಿಸಿ ಇದೇ ಕೊನೆ ಪಿಕ್ಚರ್ ಎಂದಿದ್ದರು ಶ್ರುತಿ ಹರಿಹರನ್. ಆದರೆ ತಿಂಗಳ ಹಿಂದೆ ‘ಆದ್ಯಾ’ ಎಂಬ ಚಿತ್ರ ಬಿಡುಗಡೆ ಆಯಿತು. ಇದೀಗ ‘ಹೂಮಳೆ’ ಚಿತ್ರದ ನಿರ್ಮಾಪಕರಾದ ನಡಹಳ್ಳಿ ಶ್ರೀಪಾದ್‌ರಾವ್ ಅವರ ‘ಅಂತ್ಯವಲ್ಲ ಆರಂಭ’ ಎಂಬ ಸಿನೆಮಾ ಮಾಡಿ ಮುಗಿಸಿದ್ದಾರೆ. ಹೀಗೆ ಗುಟ್ಟಾಗಿ ಮಾಡಿರುವ ಚಿತ್ರಗಳು ಇನ್ನೆಷ್ಟಿವೆಯೋ ಗೊತ್ತಿಲ್ಲಾ ಶಿವಾ!

Leave a Reply

Your email address will not be published.

*